Footer Logo

Tuesday, October 5, 2021

ಬೀದರ್ ಕೋರ್ಟ್‌ನಲ್ಲಿ ಸ್ಟೆನೋಗ್ರಾಫರ್, ಟೈಪಿಸ್ಟ್‌ ಹುದ್ದೆಗೆ ಅರ್ಜಿ ಆಹ್ವಾನ

  ADMIN       Tuesday, October 5, 2021




ಬೀದರ್ ನ್ಯಾಯಾಲಯದ ಶೀಘ್ರಲಿಪಿಕಾರರು ಮತ್ತು ಬೆರಳಚ್ಚುಕಾರರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ಕಳೆದ ತಿಂಗಳು ಅರ್ಜಿ ಆಹ್ವಾನಿಸಲಾಗಿತ್ತು. ಪ್ರಸ್ತುತ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ 7 ದಿನಗಳು ಬಾಕಿ ಇದ್ದು, ಆಸಕ್ತರು ಬೇಗ ಬೇಗ ಅರ್ಜಿ ಸಲ್ಲಿಸಿ.

71 ಸಹಾಯಕ ಗುಣಮಟ್ಟ ನಿಯಂತ್ರಣ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೀದರ್ ವಿವಿಧ ನ್ಯಾಯಾಲಯಗಳಲ್ಲಿ ಅಗತ್ಯ ಇರುವ ಶೀಘ್ರಲಿಪಿಕಾರರು, ಬೆರಳಚ್ಚುಗಾರರು ಹುದ್ದೆಗಳ ಭರ್ತಿಗೆ ಕಳೆದ ತಿಂಗಳು ಅಧಿಸೂಚನೆ ಪ್ರಕಟಿಸಲಾಗಿತ್ತು. ಸದರಿ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ 7 ದಿನಗಳು ಬಾಕಿ ಇವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಆನ್‌ಲೈನ್‌ ಅರ್ಜಿ ಸಲ್ಲಿಸಿ.

ಖಾಲಿ ಇರುವ ಹಿಂಬಾಕಿ ಹುದ್ದೆಗಳಾದ ಸ್ಟೆನೋಗ್ರಾಫರ್ ಗ್ರೇಡ್‌ III ಮತ್ತು ಟೈಪಿಸ್ಟ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳು ಮತ್ತು ಅಗತ್ಯ ಮಾಹಿತಿಗಳನ್ನು ಕೆಳಗಿನಂತೆ ನೀಡಲಾಗಿದೆ.

ಹುದ್ದೆಗಳ ವಿವರಗಳು:

  • ಸ್ಟೆನೊಗ್ರಾಫರ್ ಗ್ರೇಡ್‌ III : 12
  • ಟೈಪಿಸ್ಟ್‌ : 09

ವಿದ್ಯಾರ್ಹತೆ (2 ಹುದ್ದೆಗಳಿಗೂ):

  • ದ್ವಿತೀಯ ಪಿಯುಸಿ / ಮೂರು ವರ್ಷದ ಡಿಪ್ಲೊಮ / ತತ್ಸಮಾನ ಪರೀಕ್ಷೆಯಲ್ಲಿ ಪಾಸ್‌ ಆಗಿರಬೇಕು.
  • ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಹಿರಿಯ ಶ್ರೇಣಿ ಶೀಘ್ರಲಿಪಿ ಮತ್ತು ಬೆರಳಚ್ಚು ಅಥವಾ ಡಿಪ್ಲೊಮ ವಾಣಿಜ್ಯ ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ, ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸುವ ಕಡೆಯ ದಿನಾಂಕದೊಳಗೆ ಉತ್ತೀರ್ಣರಾಗಿರಬೇಕು.

ಅರ್ಜಿ ಶುಲ್ಕ ವಿವರ:

  • ಸಾಮಾನ್ಯ ವರ್ಗ, ಪ್ರವರ್ಗ 2A, 2B, 3A 3B ಅಭ್ಯರ್ಥಿಗಳಿಗೆ ರೂ.200.
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ರೂ.100.

ವಯೋಮಿತಿ ಅರ್ಹತೆಗಳು:

  • ಸಾಮಾನ್ಯ ವರ್ಗ : 35 ವರ್ಷ
  • ಪ್ರವರ್ಗ 2A, 2B, 3A, 3B : 38 ವರ್ಷ
  • ಎಸ್‌ಸಿ, ಎಸ್‌ಟಿ, ಪ್ರವರ್ಗ-1 : 40 ವರ್ಷ

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 13-09-2021
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 09-10-2021 ರಾತ್ರಿ 11-59 ಗಂಟೆವರೆಗೆ.

ಪ್ರಮುಖ ಲಿಂಕ್ ಗಳು :

Notification:ಕ್ಲಿಕ್ ಮಾಡಿ 

Apply online:ಕ್ಲಿಕ್ ಮಾಡಿ 

logoblog

Thanks for reading ಬೀದರ್ ಕೋರ್ಟ್‌ನಲ್ಲಿ ಸ್ಟೆನೋಗ್ರಾಫರ್, ಟೈಪಿಸ್ಟ್‌ ಹುದ್ದೆಗೆ ಅರ್ಜಿ ಆಹ್ವಾನ

Previous
« Prev Post

No comments:

Post a Comment

Popular Posts