Footer Logo

Sunday, September 6, 2020

RRB NTPC/GROUP-D 2020 ಸಿಬಿಟಿ ಪರೀಕ್ಷೆ ಆರಂಭ ದಿನಾಂಕ ಪ್ರಕಟ

  ADMIN       Sunday, September 6, 2020


ರೈಲ್ವೆ ನೇಮಕಾತಿ ಮಂಡಳಿಯು (ಆರ್‌ಆರ್‌ಬಿ) ನಾನ್‌ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ (ಎನ್‌ಟಿಪಿಸಿ) ಲೆವೆಲ್‌-1 ಪೋಸ್ಟ್‌ಗಳಿಗೆ, ಐಸೋಲೇಟೆಡ್‌ ಮತ್ತು ಮಿನಿಸ್ಟೆರಿಯಲ್ ಕೆಟಗರಿ ಹುದ್ದೆಗಳಿಗೆ ಡಿಸೆಂಬರ್ 15, 2020 ರಂದು ಕಂಪ್ಯೂಟರ್ ಆಧರಿತ ಪರೀಕ್ಷೆ ನಡೆಸಲಿದೆ. 

ಈ ಕುರಿತು ರೈಲ್ವೆ ಸಚಿವರಾದ ಪಿಯೂಷ್‌ ಗೋಯಲ್ ಇಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್‌ ಮಾಡಿದ್ದಾರೆ.ಮೇಲೆ ತಿಳಿಸಿದ ರೈಲ್ವೆಯ ಮೂರು ಕೆಟಗರಿ ಹುದ್ದೆಗಳಿಗೆ ಆನ್‌ಲೈನ್‌ ಅಪ್ಲಿಕೇಶನ್‌ ಪ್ರಕ್ರಿಯೆ ಮಾರ್ಚ್ 01 ರಿಂದ 31 ರವರೆಗೆ ನಡೆಸಲಾಗಿತ್ತು. ರೈಲ್ವೆಯು ಈ ಹುದ್ದೆಗಳಿಗೆ 2 ಕೋಟಿಗಿಂತ ಅಧಿಕ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಲಾಗಿತ್ತು.


ನಾನ್‌ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ, ಐಸೋಲೇಟೆಡ್, ಮಿನಿಸ್ಟೇರಿಯಲ್ ಸೇರಿದಂತೆ ಒಟ್ಟು 1,40,640 ಹುದ್ದೆಗಳಿಗೆ ಆರ್‌ಆರ್‌ಬಿಯು 2019 ರಲ್ಲಿ ನೋಟಿಫಿಕೇಶನ್‌ ಬಿಡುಗಡೆ ಮಾಡಿತ್ತು.


ಪರೀಕ್ಷೆ ವೇಳಾಪಟ್ಟಿ, ಪ್ರವೇಶ ಪತ್ರ ಬಿಡುಗಡೆ ಮತ್ತು ಇತರೆ ಹೆಚ್ಚಿನ ವಿವರಗಳನ್ನು RRB NTPC Exam ಗೆ ಸಂಬಂಧಿಸಿದಂತೆ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುತ್ತದೆ.


ರೈಲ್ವೆ ನೇಮಕಾತಿ ಮಂಡಳಿ 2019 ರ ನಾನ್‌ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿಯ ನೇಮಕಾತಿಗೆ ನಡೆಸಬೇಕಿದ್ದ ಕಂಪ್ಯೂಟರ್ ಆಧಾರಿತ ಸ್ಟೇಜ್‌ 1 ಪರೀಕ್ಷೆಯನ್ನು 2019 ರ ಜೂನ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ನಡೆಸಬೇಕಿತ್ತು. 


ಆದರೆ ಹಲವು ಕಾರಣಗಳಿಂದ ಮತ್ತು ಇತರೆ ಪರೀಕ್ಷೆಗಳ ನಿಮಿತ್ತ ಮುಂದೂಡಿತ್ತು. ಪ್ರಸ್ತುತ ಈ ಹುದ್ದೆಗಳಿಗೆ ಅಧಿಕೃತ ದಿನಾಂಕ ಎಂಬಂತೆ ರೈಲ್ವೆ ಸಚಿವರು ಡಿಸೆಂಬರ್ 15 ರಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸುವುದಾಗಿ ತಿಳಿಸಿದ್ದಾರೆ.

logoblog

Thanks for reading RRB NTPC/GROUP-D 2020 ಸಿಬಿಟಿ ಪರೀಕ್ಷೆ ಆರಂಭ ದಿನಾಂಕ ಪ್ರಕಟ

Previous
« Prev Post

No comments:

Post a Comment

Popular Posts