Footer Logo

Saturday, February 20, 2021

ಮಂಗಳನ ಅಂಗಳದಲ್ಲಿ ರೋವರ್‌ ಇಳಿಸಿದ ಕನ್ನಡತಿಯ ಸ್ವಾತಿ ಹಣೆಯಲ್ಲಿ ಬಿಂದಿ

  ADMIN       Saturday, February 20, 2021

 ಮಂಗಳನ ಅಂಗಳದಲ್ಲಿ ರೋವರ್‌ ಇಳಿಸಿದ ಕನ್ನಡತಿಯ ಸ್ವಾತಿ ಹಣೆಯಲ್ಲಿ ಬಿಂದಿ

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕಳುಹಿಸಿದ ‘ಪರ್ಸೀವರೆನ್ಸ್‌’ ರೋವರ್‌ ಯಶಸ್ವಿಯಾಗಿ ಮಂಗಳನ ಅಂಗಳದಲ್ಲಿ ಇಳಿದಿದೆ. 

ಈ ಮೂಲಕ ಅಮೆರಿಕ ಮಹತ್ತರ ಸಾಧನೆಯೊಂದನ್ನ ಮಾಡಿದಂತೆ ಆಗಿದೆ. ಈ ರೋವರ್‌ ಮುಂದಿನ ದಿನಗಳಲ್ಲಿ ಮಂಗಳ ಗ್ರಹದಲ್ಲಿ ಜೀವಿಗಳು ವಾಸಿಸುತ್ತಿದ್ದವೇಯೇ ಎಂಬುವುದನ್ನು ಮಾಹಿತಿ ಸಂಗ್ರಹಿಸಿ ಭೂಮಿಗೆ ಕಳುಹಿಸಲಿದೆ.

ಇನ್ನು ಮಂಗಳನ ಮೇಲ್ಮೈನಲ್ಲಿ ರೋವರ್‌ ಸೇಫ್‌ ಆಗಿ ಇಳಿಯುವಲ್ಲಿ ಪ್ರಮುಖ ಪಾತ್ರವಹಿಸಿರುವುದು ಕನ್ನಡತಿ ಸ್ವಾತಿ ಮೋಹನ್‌. 




ಹೌದು, ಬೆಂಗಳೂರು ಮೂಲದ ವಿಜ್ಞಾನಿ ಡಾ. ಸ್ವಾತಿ ಮೋಹನ್‌.ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗ ದಂಪತಿ ಮೋಹನ್‌ ಹಾಗೂ ಜ್ಯೋತಿ ಅವರ ಪುತ್ರಿಯಾಗಿದ್ದಾರೆ. 

ನಾಸಾದಲ್ಲಿ ‘ಜಿಎನ್‌ ಅಂಡ್‌ ಸಿ’ ಎಂಬ ವೈಜ್ಞಾನಿಕ ತಂಡದ ಮುಖ್ಯಸ್ಥೆಯಾಗಿದ್ದಾರೆ. ಪರ್ಸೀವರೆನ್ಸ್‌ ರೋವರನ್ನು ಮಂಗಳ ಗ್ರಹದ ಮೇಲೆ ಇಳಿಸುವ ಜವಾಬ್ದಾರಿ ಸಂಪೂರ್ಣವಾಗಿ ಇವರ ತಂಡದ್ದಾಗಿತ್ತು.

ಅದನ್ನು ಯಶಸ್ವಿಯಾಗಿ ನಿಭಾಯಿಸಿದ ಸ್ವಾತಿ ಅವರ ಬಗ್ಗೆ ಅಮೆರಿಕ, ಭಾರತದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. 

ಜಿಎನ್‌ ಅಂಡ್‌ ಸಿ ಎಂಬ ವೈಜ್ಞಾನಿಕ ತಂಡದ ಮುಖ್ಯಸ್ಥೆಯಾಗಿ ಸ್ವಾತಿ ಮೋಹನ್‌ ಕಂಟ್ರೋಲ್‌ ರೂಂನಲ್ಲಿ ಕುಳಿತು, ನೌಕೆ ಇಳಿಸಲು ಕಮಾಂಡ್‌ಗಳನ್ನು ನೀಡುತ್ತಿದ್ದರು.

logoblog

Thanks for reading ಮಂಗಳನ ಅಂಗಳದಲ್ಲಿ ರೋವರ್‌ ಇಳಿಸಿದ ಕನ್ನಡತಿಯ ಸ್ವಾತಿ ಹಣೆಯಲ್ಲಿ ಬಿಂದಿ

Previous
« Prev Post

No comments:

Post a Comment

Popular Posts