Footer Logo

Monday, May 24, 2021

ಕಪ್ಪು, ಬಿಳಿ ಆಯ್ತು: ದೆಹಲಿಯಲ್ಲಿ ಹಳದಿ ಫಂಗಸ್, ಇದೆಷ್ಟು ಮಾರಕ ಗೊತ್ತಾ?

  ADMIN       Monday, May 24, 2021

 ಭಾರತದಲ್ಲಿ ಕೋವಿಡ್ 19 ಸೋಂಕು ಭೀತಿಯ ನಡುವೆಯೇ ಕಪ್ಪು ಮತ್ತು ಬಿಳಿ ಫಂಗಸ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆಯೇ ಗಾಜಿಯಾಬಾದ್ ನಲ್ಲಿ ಈಗ ಹಳದಿ ಫಂಗಸ್ ನ ಮೊದಲ ಪ್ರಕರಣ ಮೇ 24 ವರದಿಯಾಗಿದೆ.


ರಾಷ್ಟ್ರರಾಜಧಾನಿ ಎನ್ ಸಿಆರ್ ಪ್ರದೇಶವಾದ ಗಾಜಿಯಾಬಾದ್ ನಲ್ಲಿ ಕಪ್ಪು ಮತ್ತು ಬಿಳಿ ಫಂಗಸ್ ನಂತರ ಹಳದಿ ಫಂಗಸ್ ನ ಮೊದಲ ಪ್ರಕರಣ ವರದಿಯಾಗಿದೆ ಎಂದು ತಿಳಿಸಿದೆ.ಈ ರೋಗಿಗೆ ಪ್ರಸ್ತುತ ಇಎನ್ ಟಿ ಶಸ್ತ್ರಚಿಕಿತ್ಸಕ ಡಾ.ಬ್ರಿಜ್ ಪಾಲ್ ತ್ಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.



ಏನಿದು ಹಳದಿ ಫಂಗಸ್?

ಕಪ್ಪು, ಬಿಳಿ ಶೀಲಿಂಧ್ರದಂತೆ ಹಳದಿ ಶಿಲೀಂಧ್ರದ ಸೋಂಕು ಪೀಡಿತರಲ್ಲಿ ಆಲಸ್ಯ, ತೂಕ ಇಳಿಕೆ, ಕಡಿಮೆ ಹಸಿವಿನ ಲಕ್ಷಣ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಹಳದಿ ಫಂಗಸ್ ಹೆಚ್ಚು ತೀವ್ರವಾದ ನಂತರ ಕೀವು ಸೋರಿಕೆಯಾಗಬಹುದು ಎಂದು ವರದಿ ಹೇಳಿದೆ. ಅಷ್ಟೇ ಅಲ್ಲ ಇದು ಗಾಯಗಳ ಗುಣಪಡಿಸುವಿಕೆ ಮೇಲೆ ಪರಿಣಾಮ ಬೀರುತ್ತದೆ. ಕಣ್ಣು, ಕಿವಿ ಮತ್ತು ಅಂಗಾಂಗಳ ವೈಫಲ್ಯಕ್ಕೆ ಕಾರಣವಾಗುವ ಮೂಲಕ ಕೊನೆಗೆ ಸಾವಿಗೆ ಕಾರಣವಾಗಬಹುದು ಎಂದು ತಿಳಿಸಿದೆ.


ಹಳದಿ ಶಿಲೀಂಧ್ರವು ಮಾರಣಾಂತಿಕ ಕಾಯಿಲೆಯಾಗಿದೆ. ಯಾಕೆಂದರೆ ಇದು ಆಂತರಿಕವಾಗಿ ಪ್ರಾರಂಭವಾಗಿ ನಂತರ ಕಾಣಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ವ್ಯಕ್ತಿಗೆ ಈ ರೋಗ ಲಕ್ಷಣ ಕಂಡುಬಂದಲ್ಲಿ ಕೂಡಲೇ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ವರದಿ ವಿವರಿಸಿದೆ.


ಕೊಳಚೆ ನೈರ್ಮಲ್ಯವು ಹೆಚ್ಚಾಗಿ ಹಳದಿ ಶಿಲೀಂಧ್ರ ಸೋಂಕನ್ನು ಉಂಟುಮಾಡುತ್ತದೆ. ಅಲ್ಲದೇ ಹಾಳಾದ ಆಹಾರ ಮತ್ತು ಮಲದ ಮೂಲಕ ಈ ಸೋಂಕು ಹರಡುತ್ತದೆ. ಅಲ್ಲದೇ ಅತೀಯಾದ ತೇವಾಂಶ ಕೂಡಾ ಈ ಬ್ಯಾಕ್ಟೀರಿಯಾ ಹರಡಲು ಕಾರಣವಾಗಬಹುದು.


ಬ್ಲ್ಯಾಕ್ ಮತ್ತು ವೈಟ್ ಫಂಗಸ್ ಕಾಣಿಸಿಕೊಂಡ ರೋಗಿಗೆ ನೀಡುವ ಚಿಕಿತ್ಸೆ ದ್ವಿಗುಣವಾಗುತ್ತದೆ. ಈ ರೋಗ ಉಲ್ಬಣಗೊಂಡಾಗ ವೈಟ್ ನಂತರ ರೋಗಿಯಲ್ಲಿ ಹಳದಿ ಫಂಗಸ್ ಕಾಣಿಸಿಕೊಳ್ಳುತ್ತದೆ. ತೂಕ ಇಳಿಯುವಿಕೆ, ಹಸಿವು ಆಗದಿರುವುದು, ನಿಶ್ಯಕ್ತಿ, ಅಪೌಷ್ಟಿಕತೆ ಮತ್ತು ಅಂಗಾಂಗ ವೈಫಲ್ಯ ಈ ಹಳದಿ ಫಂಗಸ್ ಲಕ್ಷಣಗಳು. ಹಳದಿ ಶಿಲೀಂಧ್ರವು ಮಾರಣಾಂತಿಕ ಕಾಯಿಲೆಯಾಗಿದ್ದು, ಇದು ರೋಗಿಯನ್ನ ಆಂತರಿಕವಾಗಿ ಕ್ಷೀಣಿಸುತ್ತದೆ. ಈ ರೀತಿಯ ರೋಗ ಲಕ್ಷಣಗಳು ಕಂಡು ಬಂದ್ರೆ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು. ಇದಕ್ಕೆ ಅಂಫೊಟೆರಾಸಿನ್ ಇಂಜೆಕ್ಷನ್ ಏಕೈಕ ಮದ್ದು. ಜನರು ತಾವು ವಾಸವಾಗಿರುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ.



logoblog

Thanks for reading ಕಪ್ಪು, ಬಿಳಿ ಆಯ್ತು: ದೆಹಲಿಯಲ್ಲಿ ಹಳದಿ ಫಂಗಸ್, ಇದೆಷ್ಟು ಮಾರಕ ಗೊತ್ತಾ?

Previous
« Prev Post

No comments:

Post a Comment

Popular Posts