Footer Logo

Wednesday, July 28, 2021

ಪ್ರಧಾನಮಂತ್ರಿ ಜನ ವಿಕಾಸ ಕಾರ್ಯಕ್ರಮ (PMJVK): (Pradhan Mantri Jan Vikas Karyakaram (PMJVK)

  ADMIN       Wednesday, July 28, 2021

 ಪ್ರಧಾನಮಂತ್ರಿ ಜನ ವಿಕಾಸ ಕಾರ್ಯಕ್ರಮ (PMJVK): (Pradhan Mantri Jan Vikas Karyakaram (PMJVK)


ಸಂದರ್ಭ:ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ‘ಪ್ರಧಾನ ಮಂತ್ರಿ ಜನ ವಿಕಾಸ್ ಕಾರ್ಯಕ್ರಮ’ (Pradhan Mantri Jan Vikas Karyakaram – PMJVK) ವನ್ನು ದೇಶದ ಗುರುತಿಸಲ್ಪಟ್ಟ ಅಲ್ಪಸಂಖ್ಯಾತ ಬಾಹುಳ್ಯದ ಪ್ರದೇಶಗಳಲ್ಲಿ (Minority Concentration Areas – MCAs) ಜಾರಿಗೆ ತರುತ್ತಿದೆ.



 ಪ್ರಧಾನಮಂತ್ರಿ ಜನ ವಿಕಾಸ ಕಾರ್ಯಕ್ರಮದ ಕುರಿತು:

2018 ರಲ್ಲಿ, ಕೇಂದ್ರ ಸರ್ಕಾರದಿಂದ ಹಿಂದಿನ ‘ಬಹು-ವಲಯ ಅಭಿವೃದ್ಧಿ ಕಾರ್ಯಕ್ರಮವನ್ನು (Multi-sectoral Development Programme-MsDP) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಕ್ಕಾಗಿ ಇದನ್ನು ‘ಪ್ರಧಾನ ಮಂತ್ರಿ ಜನ ವಿಕಾಸ್ ಕಾರ್ಯಕ್ರಮ’ (PMJVK) ಎಂದು ಮರುನಾಮಕರಣ ಮಾಡಲಾಯಿತು.

ಅಲ್ಪಸಂಖ್ಯಾತ ಸಮುದಾಯಗಳಿಗೆ ಉತ್ತಮ ಸಾಮಾಜಿಕ-ಆರ್ಥಿಕ ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ.

 

ಕಾರ್ಯಕ್ರಮದ ಅಡಿಯಲ್ಲಿ ವಿಶೇಷವಾಗಿ ಗಮನ ಹರಿಸಿದ ಪ್ರದೇಶಗಳಿಗೆ ಹಣ ಹಂಚಿಕೆ:

‘ಪ್ರಧಾನ್ ಮಂತ್ರಿ ಜನ ವಿಕಾಸ್ ಕಾರ್ಯಕ್ರಮ’ ದ ಅಡಿಯಲ್ಲಿ 80% ಸಂಪನ್ಮೂಲಗಳನ್ನು ಶಿಕ್ಷಣ, ಆರೋಗ್ಯ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳಿಗೆ ಮೀಸಲಿಡಲಾಗುತ್ತದೆ.

ಕಾರ್ಯಕ್ರಮದ ಅಡಿಯಲ್ಲಿ 33% ರಿಂದ 40% ಸಂಪನ್ಮೂಲಗಳನ್ನು ವಿಶೇಷವಾಗಿ ಮಹಿಳಾ ಕೇಂದ್ರಿತ ಯೋಜನೆಗಳಿಗೆ ಮಾತ್ರ ಹಂಚಲಾಗುತ್ತದೆ.

 

‘ಪ್ರಧಾನ ಮಂತ್ರಿ ಜನ ವಿಕಾಸ್ ಕಾರ್ಯಕ್ರಮ’ ದ ಫಲಾನುಭವಿಗಳು:

PMJVK ಸಂದರ್ಭದಲ್ಲಿ, ಅಲ್ಪಸಂಖ್ಯಾತ ಸಮುದಾಯಗಳೆಂದು ಅಧಿಸೂಚನೆಗೊಂಡ ಸಮುದಾಯಗಳನ್ನು 1992 ರ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸೆಕ್ಷನ್ 2 (ಸಿ) ಅಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳೆಂದು ಪರಿಗಣಿಸಲಾಗುತ್ತದೆ.

ಈ ಕಾಯಿದೆಯಡಿ, ಪ್ರಸ್ತುತ ‘ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಪಾರ್ಸಿಗಳು ಮತ್ತು ಜೈನರು’ ಎಂಬ ಆರು ಸಮುದಾಯಗಳನ್ನು ಅಲ್ಪಸಂಖ್ಯಾತ ಸಮುದಾಯಗಳಾಗಿ ಅಧಿಸೂಚಿಸಲಾಗಿದೆ.


logoblog

Thanks for reading ಪ್ರಧಾನಮಂತ್ರಿ ಜನ ವಿಕಾಸ ಕಾರ್ಯಕ್ರಮ (PMJVK): (Pradhan Mantri Jan Vikas Karyakaram (PMJVK)

Previous
« Prev Post

No comments:

Post a Comment

Popular Posts