Footer Logo

Sunday, August 8, 2021

Samagra Shiksha Scheme 2.0 to continue till 2026

  ADMIN       Sunday, August 8, 2021

 2026 ರವರೆಗೆ ಮುಂದುವರಿಯಲಿರುವ ‘ಸಮಗ್ರ ಶಿಕ್ಷಣ ಯೋಜನೆ 2.0’:


ಮಾರ್ಚ್ 31, 2026 ರವರೆಗೆ ಅಂದರೆ, ಮುಂದಿನ ಐದು ವರ್ಷಗಳವರೆಗೆ ಶಾಲಾ ಶಿಕ್ಷಣಕ್ಕಾಗಿ ‘ಸಮಗ್ರ ಶಿಕ್ಷಣ ಯೋಜನೆ’ ಯನ್ನು ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.ರಾಷ್ಟ್ರೀಯ ಶಿಕ್ಷಣ ನೀತಿ -2020 ರ ಶಿಫಾರಸುಗಳ ಆಧಾರದ ಮೇಲೆ ಹೊಸ ಘಟಕಗಳು ಮತ್ತು ಉಪಕ್ರಮಗಳನ್ನು ಅಳವಡಿಸುವ ಮೂಲಕ ಈಗ ಯೋಜನೆಯನ್ನು ಪರಿಷ್ಕರಿಸಲಾಗಿದೆ.



 

ಸಮಗ್ರ ಶಿಕ್ಷಣ ಅಭಿಯಾನ(SSA)2.0ದ ಘಟಕಗಳು:


ಯೋಜನೆಯ ನೇರ ವ್ಯಾಪ್ತಿಯನ್ನು ಹೆಚ್ಚಿಸಲು, ಎಲ್ಲಾ ಮಕ್ಕಳ ಕೇಂದ್ರಿತ ಮಧ್ಯಸ್ಥಿಕೆಗಳನ್ನು ವಿದ್ಯಾರ್ಥಿಗಳಿಗೆ ‘ನೇರ ಲಾಭ ವರ್ಗಾವಣೆ (direct benefit transfer – DBT)’ ಮೂಲಕ ‘ಮಾಹಿತಿ ತಂತ್ರಜ್ಞಾನ’ (IT) ಆಧಾರಿತ ವೇದಿಕೆಯಲ್ಲಿ ನಿಗದಿತ ಅವಧಿಯಲ್ಲಿ ಒದಗಿಸಲಾಗುವುದು.

ಈ ‘ನೇರ ಲಾಭ ವರ್ಗಾವಣೆ’ಯು ಪಠ್ಯಪುಸ್ತಕಗಳು, ಸಮವಸ್ತ್ರ ಮತ್ತು ಸಾರಿಗೆ ಭತ್ಯೆಯಂತಹ ‘ಶಿಕ್ಷಣದ ಹಕ್ಕು’(RTE) ಅಡಿಯಲ್ಲಿ ಒದಗಿಸಲಾದ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

ಭಾರತೀಯ ಭಾಷೆಗಳ ಪ್ರಚಾರದ ಕುರಿತು NEP ಯ ಶಿಫಾರಸುಗಳನ್ನು ಗಮನದಲ್ಲಿಟ್ಟುಕೊಂಡು, ಭಾಷಾ ಶಿಕ್ಷಕರ ನೇಮಕಾತಿಯ ಹೊಸ ಅಂಶವನ್ನು ಯೋಜನೆಗೆ ಸೇರಿಸಲಾಗಿದೆ – ಇದರಲ್ಲಿ ಶಿಕ್ಷಕರ ತರಬೇತಿಯ ವೆಚ್ಚ ಮತ್ತು ಶಿಕ್ಷಕರಿಗೆ ಸಂಬಳ ಬೆಂಬಲದ ಜೊತೆಗೆ ದ್ವಿಭಾಷಾ ಪುಸ್ತಕಗಳು ಮತ್ತು ಬೋಧನಾ ಸಾಮಗ್ರಿಗಳನ್ನು ಸೇರಿಸಲಾಗಿದೆ.

ನಿಪುನ್ ಭಾರತ್, ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ರಾಷ್ಟ್ರೀಯ ಮಿಷನ್, ಇದರ ಅಡಿಯಲ್ಲಿ, ಕಲಿಕಾ ಸಾಮಗ್ರಿಗಳಿಗಾಗಿ ಪ್ರತಿ ಮಗುವಿಗೆ ಪ್ರತಿ ವರ್ಷ 500 ರೂ. ಕೈಪಿಡಿಗಳು ಮತ್ತು ಸಂಪನ್ಮೂಲಗಳಿಗಾಗಿ ಪ್ರತಿ ಶಿಕ್ಷಕರಿಗೆ 150 ರೂ. ಮತ್ತು ಪ್ರತಿ ಜಿಲ್ಲೆಗೆ 10-20 ಲಕ್ಷ ರೂ.ಗಳನ್ನು ಮೌಲ್ಯಮಾಪನಕ್ಕೆ ಮೀಸಲಿಡಲಾಗಿದೆ.

ಡಿಜಿಟಲ್ ಉಪಕ್ರಮದ ಭಾಗವಾಗಿ, ‘ಮಾಹಿತಿ ಸಂವಹನ ಮತ್ತು ತರಬೇತಿ’ (ಐಸಿಟಿ) ಪ್ರಯೋಗಾಲಯ, ಡಿಜಿಟಲ್ ಬೋರ್ಡ್, ಸ್ಮಾರ್ಟ್ ತರಗತಿ ಕೊಠಡಿಗಳು, ವರ್ಚುವಲ್ ತರಗತಿ ಕೊಠಡಿಗಳು ಮತ್ತು ಡಿಟಿಎಚ್ ಚಾನೆಲ್‌ಗಳ ಪ್ರಸಾರದ ಬೆಂಬಲದೊಂದಿಗೆ ಸ್ಮಾರ್ಟ್ ಕ್ಲಾಸ್‌ರೂಮ್ ಒದಗಿಸಲು ಅವಕಾಶವಿದೆ.

ಇದರಲ್ಲಿ, 16 ರಿಂದ 19 ವರ್ಷದೊಳಗಿನ ಶಾಲೆ ಬಿಟ್ಟ ಅಥವಾ ಶಾಲೆಯಿಂದ ಹೊರಗುಳಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನ ಮಕ್ಕಳಿಗೆ ಅವರು ತಮ್ಮ ಪ್ರೌಢ ಶಿಕ್ಷಣ / ಉನ್ನತ ಮಾಧ್ಯಮಿಕ ಶಿಕ್ಷಣವನ್ನು ‘ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ’ ದ ಮೂಲಕ ಪೂರೈಸಲು ಅನುಕೂಲವಾಗುವಂತೆ ಪ್ರತಿ ವರ್ಗಕ್ಕೆ 2000 ರೂ.ಗಳ ಧನಸಹಾಯವನ್ನು ಒದಗಿಸುವ ನಿಬಂಧನೆಯನ್ನು ಅಳವಡಿಸಲಾಗಿದೆ.

ಒಂದು ಶಾಲೆಯ ಕನಿಷ್ಠ 2 ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್‌ನಲ್ಲಿ ಭಾಗವಹಿಸಿ ಅದರಲ್ಲಿ ಅವರು ಪದಕ ಗೆದ್ದರೆ, ಆ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗೆ ರೂ. 25,000 ವರೆಗೆ ಹೆಚ್ಚುವರಿ ಕ್ರೀಡಾ ಪ್ರೋತ್ಸಾಹಧನವನ್ನು ನೀಡಲು ಇದು ಅವಕಾಶವನ್ನು ಒದಗಿಸುತ್ತದೆ.

 


ಸಮಗ್ರ ಶಿಕ್ಷಣ ಅಭಿಯಾನ: (Samagra Shiksha)


ಶಾಲಾ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಅಂತರ್ಗತ ಮತ್ತು ಸಮಾನ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಪೂರ್ವ ಶಿಕ್ಷಣದಿಂದ 12 ನೇ ತರಗತಿಯವರೆಗಿನ ಎಲ್ಲಾ ಅಂಶಗಳನ್ನು ಒಳಗೊಂಡ ಸಂಯೋಜಿತ ಯೋಜನೆಯೇ ಸಮಗ್ರ ಶಿಕ್ಷಣ ಯೋಜನೆಯಾಗಿದೆ.

ಸಮಗ್ರ ಶಿಕ್ಷಣವು ಸರ್ವ ಶಿಕ್ಷಾ ಅಭಿಯಾನ (SSA), ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭಿಯಾನ (RMSA) ಮತ್ತು ಶಿಕ್ಷಕರ ಶಿಕ್ಷಣ (TE) ಎಂಬ ಮೂರು ಯೋಜನೆಗಳನ್ನು ಸಂಯೋಜಿಸುತ್ತದೆ.

ಈ ಯೋಜನೆಯು ಪೂರ್ವ-ಪ್ರಾಥಮಿಕ, ಪ್ರಾಥಮಿಕ, ಹಿರಿಯ ಪ್ರಾಥಮಿಕ, ಮಾಧ್ಯಮಿಕದಿಂದ ಉನ್ನತ ಮಾಧ್ಯಮಿಕ ಮಟ್ಟದ ವರೆಗೆ ‘ಶಾಲೆಯನ್ನು ನಿರಂತರತೆಯಾಗಿ’ ಕಲ್ಪಿಸುತ್ತದೆ.

ಇದು ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಮತ್ತು ಮಕ್ಕಳಿಗೆ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಲು ಸಾರ್ವತ್ರಿಕ ಪ್ರವೇಶವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಇಂಗ್ಲಿಷ್ ಭಾಷೆಯ ಅಕ್ಷರವಾದ ಎರಡು T(two Ts)‘ಶಿಕ್ಷಕರು’ ಮತ್ತು ‘ತಂತ್ರಜ್ಞಾನ’ ಗಳನ್ನು ಸಂಯೋಜಿಸುವ ಮೂಲಕ ಎಲ್ಲಾ ಹಂತಗಳಲ್ಲಿ ಗುಣಮಟ್ಟವನ್ನು ಸುಧಾರಿಸುವುದು ಈ ಯೋಜನೆಯ ಮುಖ್ಯ ಗಮನವಾಗಿದೆ.

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (RTE) ಕಾಯ್ದೆ, 2009 ರ ಅನುಷ್ಠಾನಕ್ಕೆ ರಾಜ್ಯಗಳಿಗೆ ನೆರವು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಈ ಯೋಜನೆಯನ್ನು ‘ಕೇಂದ್ರ ಪ್ರಾಯೋಜಿತ ಯೋಜನೆ’ ಎಂದು ಜಾರಿಗೊಳಿಸಲಾಗುತ್ತಿದೆ. ಇದರಲ್ಲಿ, ಕೇಂದ್ರ ಮತ್ತು ಹೆಚ್ಚಿನ ರಾಜ್ಯಗಳ ನಡುವೆ 60:40 ಅನುಪಾತದಲ್ಲಿ ಧನಸಹಾಯವನ್ನು ನೀಡಲಾಗುತ್ತದೆ.

logoblog

Thanks for reading Samagra Shiksha Scheme 2.0 to continue till 2026

Previous
« Prev Post

No comments:

Post a Comment

Popular Posts