ಭಾರತೀಯ ಸ್ಟೇಟ್ ಬ್ಯಾಂಕ್ 2020ನೇ ಸಾಲಿನ ಜಾಹಿರಾತು ಸಂಖ್ಯೆ CRPD/APPR/2020-21/07 ರ ಅಪ್ರೆಂಟಿಸ್ ನೇಮಕ ಅಧಿಸೂಚನೆಯನ್ನು ಕಾರಣಾಂತರಗಳಿಂದ ರದ್ದುಗೊಳಿಸಿದೆ. ಈ ನೋಟಿಫಿಕೇಶನ್ ಪ್ರಕಾರ 8500 ಅಪ್ರೆಂಟಿಸ್‌ಗಳ ಭರ್ತಿಗೆ ನೇಮಕ ಪ್ರಕ್ರಿಯೆ ನಡೆಸಲು ಉದ್ದೇಶಿಸಲಾಗಿತ್ತು.
ಪ್ರಸ್ತುತ ಈ ಅಧಿಸೂಚನೆಯನ್ನು ರದ್ದುಗೊಳಿಸಿ, ಎಸ್‌ಬಿಐ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳ ಅಪ್ಲಿಕೇಶನ್ ಶುಲ್ಕವನ್ನು ಮರುಪಾವತಿ ಮಾಡಲಾಗುವುದು ಎಂದು ತಿಳಿಸಿದೆ. ಅಭ್ಯರ್ಥಿಗಳು ತಮ್ಮ ಶುಲ್ಕ ಹಿಂಪಡೆಯಲು ಆಗಸ್ಟ್ 01, 2021 ರಿಂದ ಲಿಂಕ್ ಓಪನ್ ಆಗಿದ್ದು, ಆಗಸ್ಟ್ 31, 2021 ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಎಸ್‌ಬಿಐ ಪ್ರಕಟಣೆ ಹೇಳಿದೆ.
ಎಸ್‌ಬಿಐ ಅಪ್ರೆಂಟಿಸ್ ಅರ್ಜಿ ಶುಲ್ಕ ಹಿಂಪಡೆಯಲು ಅರ್ಜಿಗಾಗಿ ಡೈರೆಕ್ಟ್ ಲಿಂಕ್ ಅನ್ನು ಈ ಕೆಳಗಿನಂತೆ ನೀಡಲಾಗಿದೆ.
ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ ಓಪನ್ ಆದ ಐಬಿಪಿಎಸ್ ವೆಬ್‌ಪೇಜ್‌ನಲ್ಲಿ ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ ನಂಬರ್, ಪಾಸ್‌ವರ್ಡ್ ನೀಡಿ ಲಾಗಿನ್ ಆಗಬೇಕು. ನಂತರ ಅಗತ್ಯ ಮಾಹಿತಿಗಳನ್ನು ನೀಡಿ ಅರ್ಜಿ ಪೂರ್ಣಗೊಳಿಸಿ.
ಅಭ್ಯರ್ಥಿಗಳು ನೀಡಿದ ಬ್ಯಾಂಕ್ ಖಾತೆ ನಂಬರ್‌ಗೆ ಅವರು ಪಾವತಿಸಿದ್ದ ಅಪ್ಲಿಕೇಶನ್ ಶುಲ್ಕ ಮರುಸಂದಾಯವಾಗುತ್ತದೆ. ಈ ಕುರಿತು ಅವರ ರಿಜಿಸ್ಟರ್ ಇಮೇಲ್ ವಿಳಾಸ, ಮೊಬೈಲ್ ನಂಬರ್‌ಗೆ ಸಂದೇಶವು ಸಹ ಬರುತ್ತದೆ.
ಬಿಟೆಕ್ ಮಾಡಿದ ಐಟಿ ಇಂಜಿನಿಯರ್‌ಗಳಿಗೆ ಯಾವೆಲ್ಲಾ ಸರ್ಕಾರಿ ಉದ್ಯೋಗಾವಕಾಶಗಳಿವೆ ಗೊತ್ತೇ?
ಎಸ್‌ಬಿಐ 8500 ಅಪ್ರೆಂಟಿಸ್ ಹುದ್ದೆಗಳ ನೇಮಕ ಪ್ರಕ್ರಿಯೆ ರದ್ದುಗೊಳಿಸಿರುವುದಕ್ಕೆ ನಿರ್ಧಿಷ್ಟ ಕಾರಣಗಳನ್ನು ತಿಳಿಸಿಲ್ಲ. ಆದರೆ ದೇಶದಾದ್ಯಂತ 8500 ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಬಹುದೊಡ್ಡ ನಿರಾಸೆ ಉಂಟಾಗಿದೆ. ಕರ್ನಾಟಕದಲ್ಲಿಯೂ ಈ ನೇಮಕ ಪ್ರಕ್ರಿಯೆ ಅಡಿಯಲ್ಲಿ 600 ಹುದ್ದೆಗಳು ಖಾಲಿ ಇದ್ದವು. ಮೂರು ವರ್ಷಗಳ ಅವಧಿಗೆ ಈ ಅಪ್ರೆಂಟಿಸ್ ಉದ್ಯೋಗಾವಕಾಶವಿತ್ತು. ಒಂದು ವೇಳೆ ಅಭ್ಯರ್ಥಿಗಳು ಈ ನೇಮಕ ಪ್ರಕ್ರಿಯೆ ಮೂಲಕ ಆಯ್ಕೆಯಾಗಿದ್ದರೆ ಮಾಸಿಕವಾಗಿ ರೂ. 15,000 ದಿಂದ 20,000 ರವರೆಗೆ ಸಂಭಾವನೆ ಸಿಗುತ್ತಿತ್ತು.
ಭಾರತೀಯ ಸ್ಟೇಟ್ ಬ್ಯಾಂಕ್ 8500 ಅಪ್ರೆಂಟಿಸ್ ಹುದ್ದೆಗಳ ನೇಮಕಕ್ಕೆ 2020 ರ ನವೆಂಬರ್‌ನಲ್ಲಿ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿತ್ತು. ಆದರೀಗ ಈ ಅಧಿಸೂಚನೆಯನ್ನೇ ರದ್ದುಗೊಳಿಸಲಾಗಿದೆ.
No comments:
Post a Comment