Footer Logo

Thursday, October 28, 2021

ಕರ್ನಾಟಕ ಖಾದಿ ಮಂಡಳಿಯಿಂದ ಉದ್ಯೋಗ ಅಧಿಸೂಚನೆ

  ADMIN       Thursday, October 28, 2021

 ಕರ್ನಾಟಕ ಖಾದಿ ಮಂಡಳಿಯಿಂದ ಉದ್ಯೋಗ ಅಧಿಸೂಚನೆ: FDA ಸೇರಿದಂತೆ ವಿವಿಧ ಹುದ್ದೆಗಳ ನೇಮಕಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ ಖಾಲಿ ಇರುವ ಈ ಕೆಳಕಂಡ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪಿಯು, ಪದವಿ ಪಾಸಾದವರಿಗೆ ಹುದ್ದೆಗಳು ಲಭ್ಯ. ಎಸ್‌ಡಿಎ, ಎಫ್‌ಡಿಎ ಸೇರಿದಂತೆ ವಿವಿಧ ಹುದ್ದೆಗಳನ್ನು ಈ ನೇಮಕ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತದೆ.


Clik here to Online Exam Mock test Links

ಆನ್ಲೈನ್ ಪರೀಕ್ಷೆ ಬರೆಯಲು ಇಲ್ಲಿ ಕ್ಲಿಕ್ ಮಾಡಿ 🔰 ದ.15-05-2022 ರಂದು ನಡೆಯಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿನ ಗ್ರೂಪ್-ಸಿ ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ.

👉Download Hall Ticket: CLICK HEREಕರ್ನಾಟಕ ಖಾದಿ ಮಂಡಳಿ ಹುದ್ದೆಗಳ ವಿವರ:

 • ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ-2
 • ಪ್ರಥಮ ದರ್ಜೆ ಸಹಾಯಕರು-9
 • ತಾಂತ್ರಿಕ ಮೇಲ್ವಿಚಾರಕರು-5
 • ತಾಂತ್ರಿಕ ಸಹಾಯಕರು-13


ಕರ್ನಾಟಕ ಖಾದಿ ಮಂಡಳಿ  ವಿದ್ಯಾರ್ಹತೆ:

 • ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ : ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
 • ಪ್ರಥಮ ದರ್ಜೆ ಸಹಾಯಕರು : ಯಾವುದೇ ಪದವಿ ಪಡೆದಿರಬೇಕು.
 • ತಾಂತ್ರಿಕ ಮೇಲ್ವಿಚಾರಕರು : ಬಿಎಸ್ಸಿ ಅಥವಾ ಡಿಪ್ಲೊಮ ಪಾಸ್‌
 • ತಾಂತ್ರಿಕ ಸಹಾಯಕರು : ಯಾವುದೇ ಟ್ರೇಡ್‌ನಲ್ಲಿ ಐಟಿಐ ಪಾಸ್‌ ಮಾಡಿರಬೇಕು.


ಕರ್ನಾಟಕ ಖಾದಿ ಮಂಡಳಿ ಅಪ್ಲಿಕೇಶನ್‌ ಶುಲ್ಕ ವಿವರ:

 • ಸಾಮಾನ್ಯ ವರ್ಗ / ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ.800.
 • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.400.
 • ಅಂಗವಿಕಲ / ದಿವ್ಯಾಂಗ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.


ಕರ್ನಾಟಕ ಖಾದಿ ಮಂಡಳಿ ವಯೋಮಿತಿ ಅರ್ಹತೆಗಳು:

 • ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. 
 • ಸಾಮಾನ್ಯ ಅಭ್ಯರ್ಥಿಗೆ 35 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ, ಎಸ್‌ಸಿ / ಎಸ್‌ಟಿ / ಪ್ರ-1 ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.


ಕರ್ನಾಟಕ ಖಾದಿ ಮಂಡಳಿ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನೇರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ.


ಕರ್ನಾಟಕ ಖಾದಿ ಮಂಡಳಿ ಪರೀಕ್ಷಾ ಕೇಂದ್ರಗಳು:

 1. ಬೆಂಗಳೂರು
 2. ಬೆಳಗಾವಿ
 3. ಬೀದರ್ 
 4. ದಾವಣಗೆರೆ
 5. ಧಾರವಾಡ
 6. ಹುಬ್ಬಳ್ಳಿ
 7. ಕಲಬುರಗಿ
 8. ಮಂಡ್ಯ
 9. ಮೈಸೂರು
 10. ಶಿವಮೊಗ್ಗ
 11. ಮಂಗಳೂರು
 12. ಉಡುಪಿ.


ಕರ್ನಾಟಕ ಖಾದಿ ಮಂಡಳಿ ಪ್ರಮುಖ ದಿನಾಂಕಗಳು:

 • ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 25-10-2021
 • ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 24-11-2021
 • ಶುಲ್ಕವನ್ನು ಪಾವತಿಸಲು ಕೊನೆ ದಿನಾಂಕ: 24-11-2021

ಕರ್ನಾಟಕ ಖಾದಿ ಮಂಡಳಿ ಪ್ರಮುಖ ಲಿಂಕ್ ಗಳು :

logoblog

Thanks for reading ಕರ್ನಾಟಕ ಖಾದಿ ಮಂಡಳಿಯಿಂದ ಉದ್ಯೋಗ ಅಧಿಸೂಚನೆ

Previous
« Prev Post

1 comment:

Popular Posts