CISF Recruitment 2022: ದ್ವಿತೀಯ ಪಿಯುಸಿ ಪಾಸಾದವರಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಅವಕಾಶ - 249 ಹುದ್ದೆಗಳಿಗೆ ಅರ್ಜಿ ಆಹ್ವಾನ
Job Alert: ಕ್ರೀಡಾ ಕೋಟಾದಡಿ ಹೆಡ್ ಕಾನ್ಸ್‌ಟೇಬಲ್ ನೇಮಕಾತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಧಿಸೂಚನೆಯಲ್ಲಿ ಸೂಚಿಸಿರುವ ನಿಗದಿತ ಸ್ಥಳಕ್ಕೆ, ಅಧಿಸೂಚನೆಯಲ್ಲಿ ನೀಡಿರುವ ಅರ್ಜಿ ನಮೂನೆ ಪ್ರಕಾರ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, ತಲುಪಿಸಬೇಕು.
ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು (CISF Recruitment 2022) ಜೆನೆರಲ್ ಡ್ಯೂಟಿ ಹೆಡ್ ಕಾನ್ಸ್ಟೇಬಲ್ (General Duty Head constable) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಒಟ್ಟು 249 ಹುದ್ದೆಗಳ ಭರ್ತಿಗೆ ಆದೇಶ ನೀಡಿದೆ. ಈ ಹುದ್ದೆಗಳಿಗೆ 12ನೇ ತರಗತಿ ಪಾಸ್ ಜತೆಗೆ ರಾಜ್ಯ / ರಾಷ್ಟ್ರೀಯ / ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟು ಪ್ರಶಸ್ತಿ ಪಡೆದಿರಬೇಕು.
- ಇಲಾಖೆ :ಕೇಂದ್ರ ಕೈಗಾರಿಕಾ ಭದ್ರತಾ ಪಡೆ
- ಹುದ್ದೆ:ಜೆನೆರಲ್ ಡ್ಯೂಟಿ ಹೆಡ್ ಕಾನ್ಸ್ಟೇಬಲ್
- ಸಂಖ್ಯೆ:249
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ:31-03-2022 ರ ಸಂಜೆ 05 ಗಂಟೆವರೆಗೆ
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ:ಈಶಾನ್ಯ ವಲಯದ ಅಭ್ಯರ್ಥಿಗಳಿಗೆ 07-04-2022 ರ ಸಂಜೆ 05 ಗಂಟೆವರೆಗೆ
- ವಯೋಮಿತಿ :ಕನಿಷ್ಠ 18 ವರ್ಷ, ಗರಿಷ್ಠ 23 ವರ್ಷ
- ಅರ್ಜಿ ಶುಲ್ಕ :ರೂ.100. ಪ.ಜಾತಿ, ಪ.ಪಂಗಡ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ
- ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಪಾಸ್ ಮಾಡಿರಬೇಕು. ಹಾಗೂ ಸಂಬಂಧಪಟ್ಟ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿರಬೇಕು.
- ಅರ್ಜಿ ಸಲ್ಲಿಸುವುದು ಹೇಗೆ: ಆಫ್ಲೈನ್
ಕ್ರೀಡಾ ಕೋಟಾದಡಿ ಹೆಡ್ ಕಾನ್ಸ್‌ಟೇಬಲ್ ನೇಮಕಾತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಧಿಸೂಚನೆಯಲ್ಲಿ ಸೂಚಿಸಿರುವ ನಿಗದಿತ ಸ್ಥಳಕ್ಕೆ, ಅಧಿಸೂಚನೆಯಲ್ಲಿ ನೀಡಿರುವ ಅರ್ಜಿ ನಮೂನೆ ಪ್ರಕಾರ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, ತಲುಪಿಸಬೇಕು. ಅರ್ಜಿಯೊಂದಿಗೆ ಅಗತ್ಯ ದಾಖಲೆಗಳ ಜೆರಾಕ್ಸ್ ಕಾಪಿಗಳಿಗೆ ಸ್ವಯಂ ದೃಢೀಕರಣಪಡಿಸಿ ಲಗತ್ತಿಸಿರಬೇಕು.
No comments:
Post a Comment