Footer Logo

Tuesday, January 4, 2022

ಪೊಲೀಸ್‌ ಇಲಾಖೆ ವೈಜ್ಞಾನಿಕ ಅಧಿಕಾರಿ ಹುದ್ದೆಗಳ ನೇಮಕ: ಸ್ನಾತಕೋತ್ತರ ಪದವೀಧರರಿಂದ ಅರ್ಜಿ ಆಹ್ವಾನ

  ADMIN       Tuesday, January 4, 2022

 ಪೊಲೀಸ್‌ ಇಲಾಖೆ ವೈಜ್ಞಾನಿಕ ಅಧಿಕಾರಿ ಹುದ್ದೆಗಳ ನೇಮಕ: ಸ್ನಾತಕೋತ್ತರ ಪದವೀಧರರಿಂದ ಅರ್ಜಿ ಆಹ್ವಾನ



KSP Scientific Officers Recruitment 2022 Notification: ರಾಜ್ಯ ಪೊಲೀಸ್ ಇಲಾಖೆಯು ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿ ಖಾಲಿ ಇರುವ ವೈಜ್ಞಾನಿಕ ಅಧಿಕಾರಿ ಹುದ್ದೆಗಳ (ಪುರುಷ ಮತ್ತು ಮಹಿಳಾ) ಭರ್ತಿಗೆ ಅಧಿಸೂಚನೆಯನ್ನು ಇದೀಗ ಪ್ರಕಟಿಸಿದೆ.


ನ್ಯಾಯ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕಗಳಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದದ ವೈಜ್ಞಾನಿಕ ಅಧಿಕಾರಿ (ಪುರುಷ ಮತ್ತು ಮಹಿಳಾ) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ ಮತ್ತು ಕಾರ್ಯಾನುಭವ ಪಡೆದ ಆಸಕ್ತ ಅಭ್ಯರ್ಥಿಗಳಿಂದ ಪೊಲೀಸ್ ಇಲಾಖೆಯು ಅರ್ಜಿ ಆಹ್ವಾನಿಸಿದೆ.


ಹುದ್ದೆಗಳ ಸಂಖ್ಯೆ, ವಿದ್ಯಾರ್ಹತೆ, ಪ್ರಮುಖ ದಿನಾಂಕಗಳು ಮತ್ತು ಇತರೆ ಮಾಹಿತಿಗಳನ್ನು ಈ ಕೆಳಗಿನಂತೆ ಓದಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.


  • ಹುದ್ದೆಯ ಹೆಸರು:ವೈಜ್ಞಾನಿಕ ಅಧಿಕಾರಿ
  • ಹುದ್ದೆಗಳ ಸಂಖ್ಯೆ:16 (14 NKK+2KK)
  • ವಿದ್ಯಾರ್ಹತೆ : ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಜತೆಗೆ, ಎರಡು ವರ್ಷ ಸಂಶೋಧನಾ ಅನುಭವ ಹೊಂದಿರಬೇಕು.
  • ವೇತನ : ರೂ.40900 - 78200 ವರೆಗೆ.
  • ನೇಮಕಾತಿ ವಿಧಾನ : ಲಿಖಿತ ಪರೀಕ್ಷೆ.


ವಯೋಮಿತಿ ಅರ್ಹತೆಗಳು:

ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಆಗಿರಬೇಕು. ವರ್ಗಾವಾರು ಗರಿಷ್ಠ ವಯೋಮಿತಿ ವಿವರ ಈ ಕೆಳಗಿನಂತಿದೆ.

ಸಾಮಾನ್ಯ ವರ್ಗ: 35 ವರ್ಷ.

ಒಬಿಸಿ : 38 ವರ್ಷ.

ಎಸ್‌ಸಿ / ಎಸ್‌ಟಿ / ಪ್ರವರ್ಗ-1 : 40 ವರ್ಷ.


ಅರ್ಜಿ ಶುಲ್ಕ ವಿವರ:

ಸಾಮಾನ್ಯ ವರ್ಗ: 250 ರೂ.

ಒಬಿಸಿ : 250 ರೂ.

ಎಸ್‌ಸಿ / ಎಸ್‌ಟಿ / ಪ್ರವರ್ಗ-1 : 100 ರೂ.


ವಿಭಾಗವಾರು ವೈಜ್ಞಾನಿಕ ಹುದ್ದೆಗಳ ವಿವರ:

  1. ಭೌತಶಾಸ್ತ್ರ:2
  2. ಡಿಎನ್‌ಎ:4
  3. ಕಂಪ್ಯೂಟರ್ ಫಾರೆನ್ಸಿಕ್:2
  4. ಮೊಬೈಲ್ ಫಾರೆನ್ಸಿಕ್:2
  5. ಆಡಿಯೋ ವಿಡಿಯೋ ಫಾರೆನ್ಸಿಕ್:2
  6. ವಿಷ ವಿಜ್ಞಾನ:2
  7. ಜೀವಶಾಸ್ತ್ರ:2



ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 30-12-2021

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 28-01-2022

ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ: 31-01-2022


ಅರ್ಜಿ ಸಲ್ಲಿಕೆ ಹೇಗೆ?

- ವೆಬ್‌ಸೈಟ್‌ http://fslab21.ksponline.co.in/ ಗೆ ಭೇಟಿ ನೀಡಿ.

- ಓಪನ್ ಆದ ಪೇಜ್‌ನಲ್ಲಿ 'New Application' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

- ನಂತರ ಓಪನ್ ಆದ ಪೇಜ್‌ನಲ್ಲಿ ಅಗತ್ಯ ಮಾಹಿತಿಗಳನ್ನು ನೀಡಿ ಅರ್ಜಿ ಪೂರ್ಣಗೊಳಿಸಿ.


ಇತರೆ ಹೆಚ್ಚಿನ ಮಾಹಿತಿಗಳಿಗೆ ಕರ್ನಾಟಕ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಈ ಕೆಳಗಿನ ನೋಟಿಫಿಕೇಶನ್‌ ಅನ್ನು ಕ್ಲಿಕ್ ಮಾಡಿ ಓದಿರಿ.


DOWNLOAD NOTIFICATION


APPLY ONLINE NOW



logoblog

Thanks for reading ಪೊಲೀಸ್‌ ಇಲಾಖೆ ವೈಜ್ಞಾನಿಕ ಅಧಿಕಾರಿ ಹುದ್ದೆಗಳ ನೇಮಕ: ಸ್ನಾತಕೋತ್ತರ ಪದವೀಧರರಿಂದ ಅರ್ಜಿ ಆಹ್ವಾನ

Previous
« Prev Post

No comments:

Post a Comment

Popular Posts