Footer Logo

Sunday, March 20, 2022

15,000 ಶಿಕ್ಷಕರ ನೇಮಕ: ನೋಟಿಫಿಕೇಶನ್, ಪರೀಕ್ಷೆ ದಿನಾಂಕ, ಇತರೆ ಮಾಹಿತಿ ಇಲ್ಲಿದೆ

  ADMIN       Sunday, March 20, 2022

 15,000 ಶಿಕ್ಷಕರ ನೇಮಕ: ನೋಟಿಫಿಕೇಶನ್, ಪರೀಕ್ಷೆ ದಿನಾಂಕ, ಇತರೆ ಮಾಹಿತಿ ಇಲ್ಲಿದೆ



Karnataka GPSTR 2022 Notification Date: 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ನೋಟಿಫಿಕೇಶನ್‌ ಬಿಡುಗಡೆ ಯಾವಾಗ ಎಂದು ಇಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್‌ ರವರು ಮಾಹಿತಿ ನೀಡಿದ್ದಾರೆ.

ಮಾರ್ಚ್‌ 21 ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗುತ್ತದೆ. ಮಾರ್ಚ್‌ 21 ರಿಂದ ಏಪ್ರಿಲ್‌ 22 ರವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸ್ವೀಕಾರ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯೇ ಕಾಮನ್ ಅಡ್ಮಿಷನ್‌ ಸೆಲ್‌ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಸಲಿದೆ. 6 ರಿಂದ 8ತಿಂಗಳೊಳಗೆ ಪ್ರಕ್ರಿಯೆ ಮುಕ್ತಾಯವಾಗಲಿದೆ. ಮುಂದಿನ ಶೈಕ್ಷಣಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಅಭ್ಯರ್ಥಿಗಳಿಗೆ ನೇಮಕ ಆದೇಶ ಕೈಸೇರಲಿದೆ ಎಂದು ಸಚಿವರು ತಿಳಿಸಿದರು.


ನೇಮಕಾತಿ ಇಲಾಖೆ : ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ

ಹುದ್ದೆಗಳ ಹೆಸರು : ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು

ಹುದ್ದೆಗಳ ಸಂಖ್ಯೆ : 15,000

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ವಿವರ

ಉಳಿಕೆ ಮೂಲ ವೃಂದದ ಹುದ್ದೆಗಳ ಸಂಖ್ಯೆ: 10,000

ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳ ಸಂಖ್ಯೆ : 5000


ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ವಿದ್ಯಾರ್ಹತೆ


ಪದವಿಯಲ್ಲಿ ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಉತ್ತೀರ್ಣ ಮತ್ತು ಪ್ರಾಥಮಿಕ ಶಿಕ್ಷಣ ತರಬೇತಿಯ 2 ವರ್ಷಗಳ ಡಿಪ್ಲೊಮ ಉತ್ತೀರ್ಣರಾಗಿರಬೇಕು. ಅಥವಾ

ಪದವಿಯಲ್ಲಿ ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಉತ್ತೀರ್ಣ ಮತ್ತು ಬಿ.ಇಡಿ ಪದವಿ ಪಡೆದಿರಬೇಕು. ಅಥವಾ

ವಿಶೇಷ ಶಿಕ್ಷಣ (ಸ್ಪೆಷಲ್ ಎಜುಕೇಶನ್) ಪದವಿ ಪಡೆದಿರಬೇಕು. ಅಥವಾ ಪಿಯುಸಿಯಲ್ಲಿ ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಉತ್ತೀರ್ಣ ಮತ್ತು 4 ವರ್ಷದ ಬ್ಯಾಚುಲರ್ ಆಫ್‌ ಎಲಿಮೆಂಟರಿ ಎಜುಕೇಷನ್‌ನಲ್ಲಿ ಪದವಿ ಅಥವಾ 4 ವರ್ಷ ವರ್ಷಗಳ ಬ್ಯಾಚುಲರ್ ಆಫ್‌ ಎಜುಕೇಷನ್‌ನಲ್ಲಿ ಉತ್ತೀರ್ಣರಾಗಿರಬೇಕು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪ್ರವರ್ಗ-1, ವಿಕಲಚೇತನ ಅಭ್ಯರ್ಥಿಗಳು ನಿಗದಿತ ವಿದ್ಯಾರ್ಹತೆಯಲ್ಲಿ ಕನಿಷ್ಠ 45 ಅಂಕಗಳನ್ನು ಗ

ವಯೋಮಿತಿ ಅರ್ಹತೆಗಳು


ಅರ್ಜಿ ಸಲ್ಲಿಸಲು ಕನಿಷ್ಠ 21ವರ್ಷ ಆಗಿರಬೇಕು.

ಗರಿಷ್ಠ ವಯೋಮಿತಿ ವರ್ಗಾವಾರು ಈ ಕೆಳಗಿನಂತೆ ನೀಡಲಾಗಿದೆ.

ಸಾಮಾನ್ಯ ಅಭ್ಯರ್ಥಿಗಳಿಗೆ 40 ವರ್ಷ

ಒಬಿಸಿ ಅಭ್ಯರ್ಥಿಗಳಿಗೆ 45 ವರ್ಷ

ಎಸ್‌ಸಿ/ಎಸ್‌ಟಿ / ಅಂಗವಿಕಲ ಅಭ್ಯರ್ಥಿಗಳಿಗೆ 47 ವರ್ಷ


ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ : ಮಾಸಿಕ ರೂ.27,650 ದಿಂದ ರೂ.52,650 ವರೆಗೆ.


ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಅನುಸರಿಸುವ ಪ್ರಮುಖ ಮಾನದಂಡಗಳು


ಬಿಇ ವ್ಯಾಸಂಗದಲ್ಲಿ ಆರ್ಕಿಟೆಕ್ಚರ್ ವಿಭಾಗದಲ್ಲಿ ಮೊದಲ 3 ಅಥವಾ 4 ಸೆಮಿಸ್ಟರ್‌ನಲ್ಲಿ ಗಣಿತ ಹಾಗೂ ಉಳಿದ ಸೆಮಿಸ್ಟರ್‌ನಲ್ಲಿ ಅಪ್ಲೈಡ್ ಮ್ಯಾಥಮೆಟಿಕ್ಸ್‌ ಓದಿರುವವರಿಗೆ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಶಿಕ್ಷಕರ ನೇಮಕಾತಿಯಲ್ಲಿ ಶೇಕಡ.01 ರಷ್ಟು ಹುದ್ದೆಗಳನ್ನು ತೃತೀಯ ಲಿಂಗಿಗಳಿಗೆ ಮೀಡಲು.

ಪ್ರತಿ ವಿಷಯದ ಶಿಕ್ಷಕ ಹುದ್ದೆಗೂ ಆಯಾ ವಿಷಯಗಳನ್ನು ಪದವಿಯಲ್ಲಿ ಅಧ್ಯಯನ ಮಾಡಿರುವವರನ್ನು ನೇಮಿಸಲಾಗುತ್ತದೆ.

ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಶೇಕಡ.50 ಅಂಕಗಳು, ಶಿಕ್ಷಕರ ಅರ್ಹತಾ ಪರೀಕ್ಷೆಯ (CTET, TET) ಫಲಿತಾಂಶದ ಶೇಕಡ.20 ಅಂಕಗಳು, ಪದವಿಯ ಶೇಕಡ.20 ಅಂಕಗಳು, ಶಿಕ್ಷಕರ ಶಿಕ್ಷಣದ ಶೇಕಡ.10 ಅಂಕಗಳನ್ನು ನೇಮಕಾತಿಗೆ ಪರಿಗಣಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ :CLICK HERE


ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು


ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ

ಆಧಾರ್ ಕಾರ್ಡ್‌

ಪದವಿ ಪ್ರಮಾಣ ಪತ್ರ

ಟಿಇಟಿ / ಸಿಟಿಇಟಿ ಸರ್ಟಿಫಿಕೇಟ್‌

ಬಿ.ಇಡಿ ಪಾಸ್‌ ಅಂಕಪಟ್ಟಿ / ಪಾಸ್‌ ಸರ್ಟಿಫಿಕೇಟ್‌

ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ಜನ್ಮ ದಿನಾಂಕ ಪ್ರಮಾಣ ಪತ್ರ (ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ)

ಮೀಸಲಾತಿ ಕೋರಿದ್ದಲ್ಲಿ ಸಂಬಂಧಿಸಿದ ಅಂಕಪಟ್ಟಿ.


ಶಿಕ್ಷಕರ ನೇಮಕಾತಿಗೆ ಪರೀಕ್ಷೆ ಹೇಗಿರುತ್ತದೆ? ಎಷ್ಟು ಪ್ರಶ್ನೆ ಪತ್ರಿಕೆಗಳಿರುತ್ತವೆ? ಆಯ್ಕೆಗೆ ಮಾನದಂಡಗಳೇನು?

ಕರ್ನಾಟಕ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ 400 ಅಂಕಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಒಟ್ಟು 3 ಪ್ರಶ್ನೆ ಪತ್ರಿಕೆಗಳಿವೆ. ಮೊದಲ ಪತ್ರಿಕೆಯಲ್ಲಿ ಅರ್ಹತೆಗೆ ಯಾವುದೇ ಕನಿಷ್ಠ ಅಂಕಗಳನ್ನು ನಿಗದಿ ಮಾಡಿಲ್ಲ. ಎರಡನೇ ಪತ್ರಿಕೆಯಲ್ಲಿ ಅರ್ಹತೆಗೆ ಕನಿಷ್ಠ ಶೇಕಡ.45 ಅಂಕಗಳನ್ನು ಗಳಿಸಬೇಕಾಗುತ್ತದೆ. ಇನ್ನು ಮೂರನೇ ಪತ್ರಿಕೆ ಭಾಷಾ ಪತ್ರಿಕೆ ಆಗಿದ್ದು, ಕನಿಷ್ಠ ಶೇಕಡ.50 ಅಂಕಗಳನ್ನು ಪಡೆಯಬೇಕಿರುತ್ತದೆ.


ಸ್ಪರ್ಧಾತ್ಮಕ ಪರೀಕ್ಷೆ ನಂತರ ಅಭ್ಯರ್ಥಿಗಳ ಆಯ್ಕೆಗೆ ಈ ಕೆಳಗಿನಂತೆ ಅಂಕಗಳನ್ನು ಮಾನದಂಡಗಳಾಗಿ ಪರಿಗಣಿಸಲಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಯ ಶೇಕಡ.50 ಅಂಕಗಳು

ಶಿಕ್ಷಕರ ಅರ್ಹತಾ ಪರೀಕ್ಷೆಯ (CTET, TET) ಫಲಿತಾಂಶದ ಶೇಕಡ.20 ಅಂಕಗಳು

ಪದವಿಯ ಶೇಕಡ.20 ಅಂಕಗಳು

ಶಿಕ್ಷಕರ ಶಿಕ್ಷಣದ ಶೇಕಡ.10 ಅಂಕಗಳು

ಈ ಮೇಲಿನ ಮಾದರಿಯಲ್ಲಿ ಅವರ ಶಿಕ್ಷಣದ, ಪರೀಕ್ಷೆಯ ಅಂಕಗಳನ್ನು ಒಟ್ಟುಗೂಡಿಸಿ ಮೆರಿಟ್‌ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ ಆಯ್ಕೆ ಮಾಡಲಾಗುತ್ತದೆ.


ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಯ ಅರ್ಹತೆಗೆ ತಿದ್ದುಪಡಿ ನಿಯಮ ಪ್ರಕಟ:


ಸಮಾಜ ಪಾಠಗಳು ಹುದ್ದೆಗಳಿಗಾಗಿ ಸಮಾಜ ಪಾಠ ಸಮೂಹ ವಿಷಯಗಳಾದ ಇತಿಹಾಸ / ಅರ್ಥಶಾಸ್ತ್ರ / ಭೂಗೋಳಶಾಸ್ತ್ರ / ರಾಜ್ಯಶಾಸ್ತ್ರ ಇವುಗಳ ಪೈಕಿ ಯಾವುದಾದರೂ ಎರಡು ವಿಷಯಗಳನ್ನು ಐಚ್ಛಿಕ ವಿಷಯಗಳಾಗಿ ಅಭ್ಯಾಸ ಮಾಡಿರಬೇಕು ಎಂದು ಹೇಳಲಾಗಿದೆ.

15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ಪೈಕಿ ವಿಷಯವಾರು ಹುದ್ದೆಗಳ ಸಂಖ್ಯೆ ಈ ಕೆಳಗಿನಂತಿದೆ.

ಆಂಗ್ಲ ಭಾಷೆ ಶಿಕ್ಷಕರ ಹುದ್ದೆಗಳು : 1500

ಗಣಿತ ವಿಜ್ಞಾನ ಶಿಕ್ಷಕರ ಹುದ್ದೆಗಳು: 6500

ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಗಳು: 5000

ಜೀವ ವಿಜ್ಞಾನ ಶಿಕ್ಷಕರ ಹುದ್ದೆಗಳು: 2000


ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ವಿದ್ಯಾರ್ಹತೆ:


ಪದವಿಯಲ್ಲಿ ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಉತ್ತೀರ್ಣ ಮತ್ತು ಪ್ರಾಥಮಿಕ ಶಿಕ್ಷಣ ತರಬೇತಿಯ 2 ವರ್ಷಗಳ ಡಿಪ್ಲೊಮ ಉತ್ತೀರ್ಣರಾಗಿರಬೇಕು. ಅಥವಾ

ಪದವಿಯಲ್ಲಿ ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಉತ್ತೀರ್ಣ ಮತ್ತು ಬಿ.ಇಡಿ ಪದವಿ ಪಡೆದಿರಬೇಕು. ಅಥವಾ

ವಿಶೇಷ ಶಿಕ್ಷಣ (ಸ್ಪೆಷಲ್ ಎಜುಕೇಶನ್) ಪದವಿ ಪಡೆದಿರಬೇಕು. ಅಥವಾ ಪಿಯುಸಿಯಲ್ಲಿ ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಉತ್ತೀರ್ಣ ಮತ್ತು 4 ವರ್ಷದ ಬ್ಯಾಚುಲರ್ ಆಫ್‌ ಎಲಿಮೆಂಟರಿ ಎಜುಕೇಷನ್‌ನಲ್ಲಿ ಪದವಿ ಅಥವಾ 4 ವರ್ಷ ವರ್ಷಗಳ ಬ್ಯಾಚುಲರ್ ಆಫ್‌ ಎಜುಕೇಷನ್‌ನಲ್ಲಿ ಉತ್ತೀರ್ಣರಾಗಿರಬೇಕು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪ್ರವರ್ಗ-1, ವಿಕಲಚೇತನ ಅಭ್ಯರ್ಥಿಗಳು ನಿಗದಿತ ವಿದ್ಯಾರ್ಹತೆಯಲ್ಲಿ ಕನಿಷ್ಠ 45 ಅಂಕಗಳನ್ನು ಗಳಿಸಿರಬೇಕು. ಹಾಗೂ

ಕಾಲ ಕಾಲಕ್ಕೆ ಎನ್‌ಸಿಟಿಇಯು ನಿಗದಿಪಡಿಸಿದ ಯಾವುದಾದರು ಉನ್ನತ ಅಥವಾ ಹೆಚ್ಚುವರಿ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.

ಸಮಾಜ ಪಾಠಗಳು ಹುದ್ದೆಗಳಿಗಾಗಿ ಸಮಾಜ ಪಾಠ ಸಮೂಹ ವಿಷಯಗಳಾದ ಇತಿಹಾಸ / ಅರ್ಥಶಾಸ್ತ್ರ / ಭೂಗೋಳಶಾಸ್ತ್ರ / ರಾಜ್ಯಶಾಸ್ತ್ರ ಇವುಗಳ ಪೈಕಿ ಯಾವುದಾದರೂ ಎರಡು ವಿಷಯಗಳನ್ನು ಐಚ್ಛಿಕ ವಿಷಯಗಳಾಗಿ ಅಭ್ಯಾಸ ಮಾಡಿರಬೇಕು.

ಬಿಇ ವ್ಯಾಸಂಗದಲ್ಲಿ ಆರ್ಕಿಟೆಕ್ಚರ್ ವಿಭಾಗದಲ್ಲಿ ಮೊದಲ 3 ಅಥವಾ 4 ಸೆಮಿಸ್ಟರ್‌ನಲ್ಲಿ ಗಣಿತ ಹಾಗೂ ಉಳಿದ ಸೆಮಿಸ್ಟರ್‌ನಲ್ಲಿ ಅಪ್ಲೈಡ್ ಮ್ಯಾಥಮೆಟಿಕ್ಸ್‌ ಓದಿರುವವರಿಗೆ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಪ್ರಮುಖ ದಿನಾಂಕಗಳು:


ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 21-03-2022

ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 22-04-2022

ಶಿಕ್ಷಕರ ನೇಮಕಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ದಿನಾಂಕ: ಮೇ 21, 22, 2022

logoblog

Thanks for reading 15,000 ಶಿಕ್ಷಕರ ನೇಮಕ: ನೋಟಿಫಿಕೇಶನ್, ಪರೀಕ್ಷೆ ದಿನಾಂಕ, ಇತರೆ ಮಾಹಿತಿ ಇಲ್ಲಿದೆ

Previous
« Prev Post

No comments:

Post a Comment

Popular Posts