3500 SC, OBC ಅಭ್ಯರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷೆ ಕೋಚಿಂಗ್: ಅರ್ಜಿಗೆ ದಿನಾಂಕ ವಿಸ್ತರಣೆ
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2022-23ನೇ ಸಾಲಿಗೆ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ನೀಡುವ ಉಚಿತ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಸಂಬಂಧಿಸಿದಂತೆ, ಅಭ್ಯರ್ಥಿಗಳ ಆಯ್ಕೆಗೆ ಅರ್ಜಿ ಆಹ್ವಾನಿಸಿತ್ತು. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಈ ಹಿಂದೆ ಮೇ 31 ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಅಭ್ಯರ್ಥಿಗಳ ಅನುಕೂಲಕ್ಕಾಗಿ ಅರ್ಜಿ ಸ್ವೀಕಾರ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಅಭ್ಯರ್ಥಿಗಳು ಜೂನ್ 15, 2022 ರವರೆಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ. ಈ ಬಗ್ಗೆ http://coaching.dosje.gov.in/ ವೆಬ್‌ಸೈಟ್‌ನಲ್ಲಿ ಲೇಟೆಸ್ಟ್ ನೋಟಿಸ್ ಬಿಡುಗಡೆ ಮಾಡಿದೆ.
ವಿವಿಧ ಪರೀಕ್ಷೆಗಳಿಗೆ ನೀಡುವ ಉಚಿತ ತರಬೇತಿ 'Free Coaching Scheme' ಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಈಗ ಜೂನ್ 15 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಹಾಕಬಹುದು. ಅರ್ಹತೆಗಳು ಇತರೆ ಹೆಚ್ಚಿನ ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿದು ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಬಹುದು.
ಈ ಉಚಿತ ತರಬೇತಿಗೆ ಗರಿಷ್ಠ 8 ಲಕ್ಷದೊಳಗೆ ವಾರ್ಷಿಕ ಕುಟುಂಬ ಆದಾಯ ಇರುವವರು ಅರ್ಜಿ ಸಲ್ಲಿಸಬಹುದು.
- 2022-23 ನೇ ಸಾಲಿಗೆ ಈ ಉಚಿತ ಕೋಚಿಂಗ್ ಸೌಲಭ್ಯ ನೀಡಲಾಗುತ್ತದೆ.
- ಅರ್ಜಿ ಸಲ್ಲಿಸಲು ವೆಬ್‌ಸೈಟ್ ವಿಳಾಸ :coaching.dosje.gov.in
- ಅರ್ಜಿ ಸಲ್ಲಿಸಿ ಉಚಿತ ಕೋಚಿಂಗ್‌ಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.4000 ವರೆಗೆ ಸ್ಟೈಫಂಡ್ ನೀಡಲಾಗುತ್ತದೆ.
- ಕೋಚಿಂಗ್ ಮುಗಿಯುವವರೆಗೆ ಈ ಸೌಲಭ್ಯ ನೀಡಲಾಗುತ್ತದೆ.
- ಕೋಚಿಂಗ್ ಗೆ ಅವಕಾಶ ನೀಡಲಾಗುವ ಅಭ್ಯರ್ಥಿಗಳ ಸಂಖ್ಯೆ
- 12th / ದ್ವಿತೀಯ ಪಿಯು ಪಾಸ್ ಅಭ್ಯರ್ಥಿಗಳ ಸಂಖ್ಯೆ : 1400
- ಪದವಿ ಪಾಸ್ ಅಭ್ಯರ್ಥಿಗಳ ಸಂಖ್ಯೆ : 2100
ಒಟ್ಟು 3500 ಅಭ್ಯರ್ಥಿಗಳ ಪೈಕಿ ಎಸ್‌ಸಿ ಕೆಟಗರಿ ಇಂದ ಹುಡುಗರ ಸಂಖ್ಯೆ 1715, ಹುಡುಗಿಯರ ಸಂಖ್ಯೆ 735, ಒಬಿಸಿ ಕೆಟಗರಿ ಇಂದ ಹುಡುಗರ ಸಂಖ್ಯೆ 735, ಹುಡುಗಿಯರ ಸಂಖ್ಯೆ 315 ಅಭ್ಯರ್ಥಿಗಳಿಗೆ ಉಚಿತ ಕೋಚಿಂಗ್ ಸೌಲಭ್ಯ ಸಿಗಲಿದೆ.
ಅಪ್ಲಿಕೇಶನ್ ಹಾಕಿದ ಅಭ್ಯರ್ಥಿಗಳನ್ನು ಆಯಾ ಕೋರ್ಸ್‌ಗೆ ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ.
ತರಬೇತಿ ನೀಡಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳ ಪಟ್ಟಿ
ಯುಪಿಎಸ್‌ಸಿ, ರಾಜ್ಯಗಳ ನಾಗರಿಕ ಸೇವಾ ಆಯೋಗಗಳು ನಡೆಸುವ ಸಿವಿಲ್ ಪರೀಕ್ಷೆಗಳು
- ಎಸ್‌ಎಸ್‌ಸಿ / ಆರ್‌ಆರ್‌ಬಿ
- ಬ್ಯಾಂಕಿಂಗ್ / ಇನ್ಸುರೆನ್ಸ್ / ಪಿಎಸ್‌ಯು / CLAT
- ಜೆಇಇ / ನೀಟ್
- ಐಇಎಸ್
- CAT / CMAT
- GRE / GMAT / SAT/ IELTS / TOFEL
- CA-CPT/GATE
- CPL ಕೋರ್ಸ್‌ಗಳು
- ಎನ್‌ಡಿಎ / ಸಿಡಿಎಸ್ ಕೋರ್ಸ್‌ಗಳು
- ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 01-05-2022
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15-06-2022
- ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಬಿಡುಗಡೆ ಮಾಡುವ ದಿನಾಂಕ: 30-06-2022
- ಕೋಚಿಂಗ್ ಸಂಸ್ಥೆಗಳಿಗೆ ಸೇರ್ಪಡೆ ಆಗಲು ಕೊನೆ ದಿನಾಂಕ : 29-12-2022
ಕೋಚಿಂಗ್ ಫೀ ಬಿಡುಗಡೆ ದಿನಾಂಕ: ಒಂದು ತಿಂಗಳ ಶುಲ್ಕದ ರಶೀದಿ ಸಬ್‌ಮಿಟ್ ಮಾಡಿದ ನಂತರ
Notification - Link 1
Notification - Link 2
No comments:
Post a Comment