Footer Logo

Tuesday, September 22, 2020

ರೈಲ್ವೆಯ NTPC ಹುದ್ದೆಗಳಿಗೆ ಪರೀಕ್ಷೆ ಹೇಗಿರುತ್ತೆ? ಪಠ್ಯಕ್ರಮ ಏನು?

  ADMIN       Tuesday, September 22, 2020

 ರೈಲ್ವೆಯ NTPC ಹುದ್ದೆಗಳಿಗೆ ಪರೀಕ್ಷೆ ಹೇಗಿರುತ್ತೆ? ಪಠ್ಯಕ್ರಮ ಏನು?

ರೈಲ್ವೆಯ ಎನ್‌ಟಿಪಿಸಿ (ನಾನ್‌ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ) ಹುದ್ದೆಗಳ ನೇಮಕಕ್ಕೆ ರೈಲ್ವೆ ನೇಮಕಾತಿ ಮಂಡಳಿ ನಡೆಸುವ ಪರೀಕ್ಷೆಯಲ್ಲಿ 3 ಹಂತಗಳಿರುತ್ತವೆ.




ಪರೀಕ್ಷೆಯ ಸ್ವರೂಪ:

ರೈಲ್ವೆಯ ಎನ್‌ಟಿಪಿಸಿ (ನಾನ್‌ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ) ಹುದ್ದೆಗಳ ನೇಮಕಕ್ಕೆ ರೈಲ್ವೆ ನೇಮಕಾತಿ ಮಂಡಳಿ ನಡೆಸುವ ಪರೀಕ್ಷೆಯಲ್ಲಿ 3 ಹಂತಗಳಿರುತ್ತವೆ. 

ಮೊದಲ ಎರಡು ಹಂತಗಳು ಕಂಪ್ಯೂಟರ್‌ ಆಧಾರಿತ ಪರೀಕ್ಷೆ ಮತ್ತು ಮೂರನೇ ಹಂತದಲ್ಲಿ ಸ್ಕಿಲ್‌ ಆಧಾರಿತ ಪರೀಕ್ಷೆಯ ಮೂಲಕ (ಹುದ್ದೆಗಳ ಅನುಸಾರವಾಗಿ) ಆಯ್ಕೆಯನ್ನು ಮಾಡಿಕೊಳ್ಳಲಾಗುತ್ತದೆ.

ಮೊದಲ ಎರಡು ಹಂತಗಳಲ್ಲಿ ಮುಖ್ಯವಾಗಿ ಸಾಮಾನ್ಯ ತಿಳಿವಳಿಕೆ, ಗಣಿತ ಮತ್ತು ಜನರಲ್‌ ಇಂಟೆಲಿಜೆನ್ಸ್‌ ಮತ್ತು ರೀಸನಿಂಗ್‌ ಮೇಲೆ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ.

RRB NTPC 2015 -16  ರ CUT -OFF ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ 

ಪಠ್ಯಕ್ರಮ ಇಂತಿದೆ:


  • ಸಾಮಾನ್ಯ ಜ್ಞಾನ : ಪ್ರಚಲಿತ ವಿದ್ಯಮಾನಗಳು, ಕ್ರೀಡೆ, ಕಲೆ ಮತ್ತು ಸಂಸ್ಕೃತಿ, ಭಾರತೀಯ ಸಾಹಿತ್ಯ, ಸ್ಮಾರಕಗಳು, ಭಾರತದ ಸ್ಥಳಗಳು, ಸಾಮಾನ್ಯ ವಿಜ್ಞಾನ, ಭಾರತದ ಸ್ವಂತಂತ್ರ್ಯ ಹೋರಾಟ ಮತ್ತು ಇತಿಹಾಸ, ಪ್ರಪಂಚ ಮತ್ತು ಭಾರತದ ಭೂಗೋಳ, ಭಾರತದ ರಾಜಕೀಯ ವ್ಯವಸ್ಥೆ ಮತ್ತು ಸಂವಿಧಾನ, ತಂತ್ರಜ್ಞಾನ ಬೆಳವಣಿಗೆ , ಪ್ರಸಿದ್ಧ ವ್ಯಕ್ತಿಗಳು, ಪರಿಸರ ಮತ್ತು ಸಂರಕ್ಷಣೆ, ಅಂತಾರಾಷ್ಟ್ರೀಯ ಸಂಸ್ಥೆಗಳು, ಪ್ರಮುಖ ಯೋಜನೆಗಳು, ಕಂಪ್ಯೂಟರ್‌ ಜ್ಞಾನ ಇತ್ಯಾದಿ.
  • ಗಣಿತ ಸಂಖ್ಯಾಶಾಸ್ತ್ರ, ದಶಮಾಂಶ ಪದ್ಧತಿ , ಭಿನ್ನರಾಶಿಗಳು, ಅನುಪಾತ, ಶೇಕಡಾವಾರು ವ್ಯವಸ್ಥೆ, ಅಳತೆ, ಸಮಯ ಮತ್ತು ಕೆಲಸ, ಸಮಯ ಮತ್ತು ದೂರ, ಬೀಜಗಣಿತ, ರೇಖಾಗಣಿತ ಇತ್ಯಾದಿ.
  • ಜನರಲ್‌ ಇಂಟೆಲಿಜೆನ್ಸ್‌ ಮತ್ತು ರೀಸನಿಂಗ್‌ಅನಲಾಜಿ, ವೆನ್‌-ಚಿತ್ರಗಳು, ಕೋಡಿಂಗ್‌ -ಡಿಕೋಡಿಂಗ್‌, ಸಂಬಂಧಗಳು, ಡೇಟಾ ಅನಾಲಿಸಿಸ್‌, ಸಂಖ್ಯೆ ಮತ್ತು ವರ್ಣಮಾಲೆ, ಸರಣಿಗಳು, ಹೋಲಿಕೆ ಮತ್ತು ವ್ಯತ್ಯಾಸಗಳು, ಸಾಕ್ಷಿ ಮತ್ತು ಗ್ರಾಫ್‌್ಸ ಇತ್ಯಾದಿ.

RRB NTPC SYLLABUS ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ 


ಆರ್‌ಆರ್‌ಬಿ ಎನ್‌ಟಿಪಿಸಿ 2020 ಪರೀಕ್ಷೆ ಮಾದರಿ ಹೇಗಿರುತ್ತದೆ?

ಎರಡು ಹಂತಗಳ ಕಂಪ್ಯೂಟರ್ ಆಧಾರಿತ ಟೆಸ್ಟ್‌(ಸಿಬಿಟಿ) ಅನ್ನು ಎನ್‌ಟಿಪಿಸಿ ಹುದ್ದೆಗಳಿಗೆ ನಡೆಸಲಾಗುತ್ತದೆ. ಅವುಗಳಲ್ಲಿ ಸ್ಕಿಲ್‌ ಟೆಸ್ಟ್‌ ಸಹ ಒಂದಾಗಿದ್ದು, ಸ್ಟೇಷನ್‌ ಮಾಸ್ಟರ್, ಟ್ರಾಫಿಕ್ ಅಸಿಸ್ಟಂಟ್ ಹುದ್ದೆಗಳಿಗೆ ನಡೆಸಲಾಗುತ್ತದೆ. ಜೂನಿಯರ್ ಕ್ಲರ್ಕ್‌ ಕಮ್ ಟೈಪಿಸ್ಟ್‌, ಜೂನಿಯರ್ ಟೈಮ್‌ ಕೀಪರ್, ಅಕೌಂಟ್ಸ್‌ ಕ್ಲರ್ಕ್‌ ಕಮ್‌ ಟೈಪಿಸ್ಟ್, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್‌, ಜೂನಿಯರ್ ಅಕೌಂಟ್ ಅಸಿಸ್ಟಂಟ್‌ ಕಮ್‌ ಟೈಪಿಸ್ಟ್‌ ಮತ್ತು ಸೀನಿಯರ್ ಟೈಮ್‌ ಕೀಪರ್‌ ಹುದ್ದೆಗಳಿಗೆ ಟೈಪಿಂಗ್ ಸ್ಕಿಲ್ ಟೆಸ್ಟ್ ನಡೆಸಲಾಗುತ್ತದೆ.

ಎರಡು ಹಂತರಗಳ ಸಿಬಿಟಿ ಪರೀಕ್ಷೆಯ ನಂತರ ಸಾಮಾನ್ಯವಾಗಿ ಮೂಲ ದಾಖಲೆಗಳ ಪರಿಶೀಲನೆ ಮತ್ತು ಮೆಡಿಕಲ್ ಎಕ್ಸಾಮಿನೇಷನ್‌ ನಡೆಸಲಾಗುತ್ತದೆ.

ಟ್ರೈನ್ ಕ್ಲರ್ಕ್‌, ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್‌, ಗೂಡ್ಸ್‌ ಗಾರ್ಡ್‌, ಸೀನಿಯರ್ ಕಮರ್ಷಿಯಲ್ ಕಮ್‌ ಟಿಕೆಟ್ ಕ್ಲರ್ಕ್‌, ಕಮರ್ಷಿಯಲ್ ಅಪ್ರೆಂಟಿಸ್ ಹುದ್ದೆಗಳಿಗೂ ಎರಡು ಹಂತದ ಸಿಬಿಟಿ ಪರೀಕ್ಷೆ ಜತೆಗೆ, ಮೂಲ ದಾಖಲೆಗಳ ಪರಿಶೀಲನೆ ಮತ್ತು ಮೆಡಿಕಲ್ ಪರೀಕ್ಷೆ ನಡೆಸಲಾಗುತ್ತದೆ.

  • ಎನ್‌ಟಿಪಿಸಿ ಹುದ್ದೆಗಳಿಗೆ ಪರೀಕ್ಷೆ ಸಮಯ:90 ನಿಮಿಷ
  • ಜೆನೆರಲ್ ಅವಾರ್‌ನೆಸ್ ಪ್ರಶ್ನೆಗಳ ಸಂಖ್ಯೆ:40
  • ಗಣಿತ ಪ್ರಶ್ನೆಗಳ ಸಂಖ್ಯೆ:30
  • ಜೆನೆರಲ್ ಇಂಟೆಲಿಜೆನ್ಸ್‌ ಮತ್ತು ರೀಸನಿಂಗ್ ಪ್ರಶ್ನೆಗಳು:30
  • ಒಟ್ಟು ಪ್ರಶ್ನೆಗಳ ಸಂಖ್ಯೆ:100
  • ಸಿಬಿಟಿ ಮೊದಲ ಹಂತದ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು, ಸಿಬಿಟಿ ಎರಡನೇ ಹಂತದ ಪರೀಕ್ಷೆಗೆ ಅರ್ಹರು. ಪ್ರತಿ ತಪ್ಪು ಉತ್ತರಗಳಿಗೆ ನೆಗೆಟಿವ್ ಮಾರ್ಕಿಂಗ್ ಇದ್ದು, 1/3 ಅಂಕ ಕಳೆಯಲಾಗುತ್ತದೆ.

RRB ಪರೀಕ್ಷೆಗೆ ಆನ್ಲೈನ್ ಟೆಸ್ಟ್ ಗಳು ಕನ್ನಡದಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ 


ನಾನ್‌ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿಯ ಪೋಸ್ಟ್‌ಗಳು:

  1. ಜೂನಿಯರ್ ಕ್ಲರ್ಕ್‌ ಕಮ್ ಟೈಪಿಸ್ಟ್‌ 
  2. ಅಕೌಂಟ್ಸ್‌ ಕ್ಲರ್ಕ್‌ ಕಮ್‌ ಟೈಪಿಸ್ಟ್‌
  3. ಜೂನಿಯರ್ ಟೈಮ್‌ ಕೀಪರ್
  4. ಟ್ರೈನ್ಸ್‌ ಕ್ಲರ್ಕ್
  5. ಕಮರ್ಷಿಯಲ್ ಕಮ್‌ ಟಿಕೆಟ್ ಕ್ಲರ್ಕ್‌
  6.  ಟ್ರಾಫಿಕ್ ಅಸಿಸ್ಟಂಟ್‌
  7. ಗೂಡ್ಸ್‌ ಗಾರ್ಡ್‌
  8.  ಸೀನಿಯರ್ ಕಮರ್ಷಿಯಲ್ ಕಮ್‌ ಟಿಕೆಟ್ ಕ್ಲರ್ಕ್‌
  9. ಸೀನಿಯರ್ ಕ್ಲರ್ಕ್‌ ಕಮ್ ಟೈಪಿಸ್ಟ್‌,
  10. ಜೂನಿಯರ್ ಅಕೌಂಟ್ ಅಸಿಸ್ಟಂಟ್‌ ಕಮ್ ಟೈಪಿಸ್ಟ್‌
  11. ಸೀನಿಯರ್ ಟೈಮ್‌ ಕೀಪರ್
  12. ಕಮರ್ಷಿಯಲ್ ಅಪ್ರೆಂಟಿಸ್ 
  13. ಸ್ಟೇಷನ್ ಮಾಸ್ಟರ್ಸ್‌.


ರೈಲ್ವೆ ಪರೀಕ್ಷೆಯ ಕುರಿತು ಇನ್ನಷ್ಟು ಮಾಹಿತಿ :

KANNADA EXAM NTPC 2021 Previous Question Papers
Sl. No RRB NTPC Exam Date Shift RRB NTPC Question Paper Download Link
01 January 19, 2017 Shift 1 Download Here
02 March 29, 2016 Shift 3 Download Here
03 March 30, 2016 Shift 1 Download Here
04 March 30, 2016 Shift 3 Download Here
05 March 31, 2016 Shift 2 Download Here
06 April 2, 2016 Shift 2 Download Here
07 April 3, 2016 Shift 1 Download Here
08 April 3, 2016 Shift 2 Download Here
09 April 5, 2016 Shift 3 Download Here
10 April 6, 2016 Shift 1 Download Here
11 April 11, 2016 Shift 1 Download Here
12 April 11, 2016 Shift 2 Download Here
12 April 12, 2016 Shift 3 Download Here
14 April 16, 2016 Shift 1 Download Here
15 April 16, 2016 Shift 3 Download Here
16 April 18, 2016 Shift 1 Download Here
17 April 19, 2016 Shift 1 Download Here
18 April 19, 2016 Shift 2 Download Here
19 April 22, 2016 Shift 2 Download Here
20 April 26, 2016 Shift 2 Download Here
21 April 27, 2016 Shift 1 Download Here
21 April 27, 2016 Shift 2 Download Here
23 April 27, 2016 Shift 3 Download Here





logoblog

Thanks for reading ರೈಲ್ವೆಯ NTPC ಹುದ್ದೆಗಳಿಗೆ ಪರೀಕ್ಷೆ ಹೇಗಿರುತ್ತೆ? ಪಠ್ಯಕ್ರಮ ಏನು?

Previous
« Prev Post

No comments:

Post a Comment

Popular Posts