Footer Logo

Thursday, February 18, 2021

7 ಲಕ್ಷ ಉದ್ಯೋಗ ಗಳಲ್ಲಿ ಸರ್ಕಾರ ಭರ್ತಿ ಮಾಡದೇ ಉಳಿದ ಇಲಾಖಾವಾರು ಹುದ್ದೆಗಳೆಷ್ಟು ಗೊತ್ತೇ? ಸಂಪೂರ್ಣ ಮಾಹಿತಿ

  ADMIN       Thursday, February 18, 2021

 7  ಲಕ್ಷ  ಉದ್ಯೋಗ ಗಳಲ್ಲಿ  ಸರ್ಕಾರ ಭರ್ತಿ ಮಾಡದೇ ಉಳಿದ ಇಲಾಖಾವಾರು ಹುದ್ದೆಗಳೆಷ್ಟು ಗೊತ್ತೇ? ಸಂಪೂರ್ಣ ಮಾಹಿತಿ 

ಕರ್ನಾಟಕ ರಾಜ್ಯ ಸರ್ಕಾರ ಕಳೆದ ಒಂದು ವರ್ಷದಲ್ಲಿ ಅಧಿಸೂಚಿಸಲಾದ ಹುದ್ದೆಗಳು ಮಾತ್ರವಲ್ಲದೇ, ಕೆಲವು ಹಿಂದಿನ ವರ್ಷದ ಹಲವು ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕೊರೊನ ಹಿನ್ನೆಲೆ ಆರ್ಥಿಕ ಸಂಕಷ್ಟ ನೆಪ ಹೇಳಿ ಸ್ಥಗಿತಗೊಳಿಸಿದೆ. ಇತ್ತೀಚೆಗೆ ಬೆರಳೆಣಿಕೆಯ ಹುದ್ದೆಗಳಿಗೆ ಮಾತ್ರ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಲು ಆರ್ಥಿಕ ಇಲಾಖೆ ಆದೇಶ ನೀಡಿದೆ.


ಆದರೆ ಸರ್ಕಾರ ಮಂಜೂರು ಮಾಡಲಾದ 7 ಲಕ್ಷ ಖಾಯಂ ಹುದ್ದೆಗಳ ಪೈಕಿ ಇನ್ನೂ 2.6 ಲಕ್ಷ ಹುದ್ದೆಗಳು ಭರ್ತಿ ಆಗದೇ ಹಾಗೆ ಉಳಿದಿವೆ.


ಯಾವ್ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ? ಇಲ್ಲಿದೆ ಲಿಸ್ಟ್‌


  • ಗೃಹ ಇಲಾಖೆ - 31,594
  • ಉನ್ನತ ಶಿಕ್ಷಣ ಇಲಾಖೆ - 12,125
  • ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ - 9,481
  • ಆರೋಗ್ಯ ಇಲಾಖೆ - 14,993
  • ಕಂದಾಯ ಇಲಾಖೆ - 10,279
  • ಕಾನೂನು ಇಲಾಖೆ - 8,392
  • ಸಿಬ್ಬಂದಿ ಇಲಾಖೆ - 6,612
  • ಪಿಡಬ್ಲ್ಯೂಡಿ ಇಲಾಖೆ - 9,033
  • ಆರ್ಥಿಕ ಇಲಾಖೆ - 2,027
  • ಸಹಕಾರ ಇಲಾಖೆ - 4,553


ಈ ಹಿನ್ನೆಲೆ ಸಾರ್ವಜನಿಕರಿಗೆ ತಲುಪಬೇಕಾದ ಸರ್ಕಾರಿ ಸೇವೆಗಳು ಸಕಾಲದಲ್ಲಿ ತಲುಪಲಾಗುತ್ತಿಲ್ಲ. ಕೆಲವೊಂದು ಕಡೆ 2-3 ಗ್ರಾಮಪಂಚಾಯತ್‌ ಗಳಿಗೆ ಒಬ್ಬರೇ ಗ್ರಾಮಪಂಚಾಯತ್ ಅಧಿಕಾರಿ (ಪಿಡಿಒ) ಕೆಲಸ ಮಾಡುತ್ತಿದ್ದಾರೆ. ಇನ್ನು ಗ್ರಾಮ ಲೆಕ್ಕಿಗ ಮತ್ತು ಆರ್‌ಐ ಹುದ್ದೆಗಳನ್ನು ಕೆಲವು ಕಡೆ ಒಬ್ಬರೇ ನಿರ್ವಹಿಸುತ್ತಿರುವ ಉದಾಹರಣೆಗಳು ಇವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸರಿಯಾದ ಸಮಯಕ್ಕೆ ಸೇವೆ ಪಡೆಯಲು ಆಗದೇ, ಸರ್ಕಾರಿ ಕಛೇರಿಗಳಿಗೆ ಸುತ್ತಿ ಸುತ್ತಿ ಬೇಸತ್ತಿದ್ದಾರೆ.


ರಾಜ್ಯದ PWD, ಕೆಪಿಟಿಸಿಎಲ್‌ , ಬಿಎಂಆರ್‌ಸಿಎಲ್‌, ಕೆಪಿಸಿಎಲ್‌ ಸೇರಿದಂತೆ, ಇತರೆ ಇಲಾಖೆಗಳ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕರ ಭರ್ತಿಗೆ ಕೆಪಿಎಸ್‌ಸಿ ಹೊರಡಿಸಿದ್ದ ನೇಮಕ ಅಧಿಸೂಚನೆಯನ್ನು ರದ್ದುಗೊಳಿಸಲಾಗಿದೆ. ಅಲ್ಲದೇ ಕೋವಿಡ್-19 ಹಿನ್ನೆಲೆ ಆರ್ಥಿಕ ನೆಪ ಹೇಳಿ ಮುಂದಿನ ಎರಡು ವರ್ಷಗಳ ಕಾಲ ಹೊಸ ನೇಮಕಾತಿಗಳಿಗೆ ತಡೆ ಹಿಡಿದಿದೆ.


logoblog

Thanks for reading 7 ಲಕ್ಷ ಉದ್ಯೋಗ ಗಳಲ್ಲಿ ಸರ್ಕಾರ ಭರ್ತಿ ಮಾಡದೇ ಉಳಿದ ಇಲಾಖಾವಾರು ಹುದ್ದೆಗಳೆಷ್ಟು ಗೊತ್ತೇ? ಸಂಪೂರ್ಣ ಮಾಹಿತಿ

Previous
« Prev Post

No comments:

Post a Comment

Popular Posts