Header Ads Widget

Breaking

Tuesday, April 6, 2021

ಸ್ಯಾಂಡಲ್ ವುಡ್ ಹಿರಿಯ ನಟಿ ಪ್ರತಿಮಾದೇವಿ ನಿಧನ


 

ಖ್ಯಾತ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರ ತಾಯಿ ಹಾಗೂ ಸ್ಯಾಂಡಲ್ ವುಡ್ ಹಿರಿಯ ನಟಿ ಪ್ರತಿಮಾದೇವಿ ಶಂಕರ್ ಸಿಂಗ್ ಅವರು ಮಂಗಳವಾರ ನಿಧನರಾಗಿದ್ದಾರೆ. ಅವರಗೆ 88 ವರ್ಷ ವಯಸ್ಸಾಗಿತ್ತು.

 

ಇಂದು ಮಧ್ಯಾಹ್ನ 2:30ರ ಸುಮಾರಿಗೆ ಕೊನೆಯುಸಿರೆಳೆದಿದ್ದು, ಅಂತಿಮ ವಿಧಿ ವಿಧಾನಗಳು ನಾಳೆ ಮಧ್ಯಾಹ್ನ ಮೈಸೂರಿನಲ್ಲಿ ನೆರವೇರಲಿದೆ ಎಂದು ಅವರ ಪುತ್ರಿ ವಿಜಯಲಕ್ಷ್ಮೀ ಸಿಂಗ್ ಮಾಹಿತಿ ನೀಡಿದ್ದಾರೆ.


ಖ್ಯಾತ ನಿರ್ಮಾಪಕ ಶಂಕರ್ ಸಿಂಗ್ ಅವರ ಪತ್ನಿಯಾಗಿದ್ದ ಪ್ರತಿಮಾದೇವಿ ಅವರಿಗೆ ಖ್ಯಾತ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಸಂಗ್ರಾಮ್ ಸಿಂಗ್, ಜೈರಾಜ್ ಸಿಂಗ್, ನಟಿ ವಿಜಯ ಲಕ್ಷ್ಮಿ ಸಿಂಗ್ ಸೇರಿದಂತೆ ನಾಲ್ವರು ಮಕ್ಕಳು.


1932 ಏಪ್ರಿಲ್ 9 ರಂದು ಜನಿಸಿದ ಪ್ರತಿಮಾದೇವಿ 1947ರಲ್ಲಿ ಕೃಷ್ಣಲೀಲಾ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. “ಜಗನ್ಮೋಹಿನಿ” ಚಿತ್ರದ ಪಾತ್ರ ಇವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು. ನಾಗಕನ್ನಿಕ, ರಾಮ ಶ್ಯಾಮ ಭಾಮ ಸೇರಿದಂತೆ ಸುಮಾರು 60 ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು

No comments:

Post a Comment

Ad Space

Comments