Footer Logo

Tuesday, April 6, 2021

ವಿಶ್ವ ಆರೋಗ್ಯ ದಿನ – ಎಪ್ರಿಲ್ 7

  ADMIN       Tuesday, April 6, 2021



1950ರ ಏಪ್ರಿಲ್ 7 ರಂದು ಪ್ರಥಮ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ಮತ್ತು ಅದರ ಬಗ್ಗೆ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ನೀವು ಸಹ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಹಾಗು ವಿಶ್ವ ಆರೋಗ್ಯ ದಿನದ ಶುಭಾಶಯವನ್ನು ಕೋರಿ. #⚕️ವಿಶ್ವ ಆರೋಗ್ಯ ದಿನ


ವಿಶ್ವದಾದ್ಯಂತ ಏಪ್ರಿಲ್ 7 ರಂದು ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ವಿಶ್ವ ಆರೋಗ್ಯ ದಿನ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆದೇಶದಂತೆ ನಡೆಸಲಾಗುತ್ತಿದ್ದು, ಈ ವರ್ಷದ ಆಚರಣೆಯ ತಿರುಳು ‘ಆರೋಗ್ಯ, ರಕ್ಷಣೆಯಲ್ಲಿ ದಾದಿಯರ ಮತ್ತು ಶುಶ್ರೂಷಕಿಯರ ಪಾತ್ರ’ ಎಂಬುದಾಗಿದೆ. ವಿಶ್ವದ ಎಲ್ಲಾ ಜನರ ಆರೋಗ್ಯ ರಕ್ಷಣೆಯಲ್ಲಿ ವೈದ್ಯರ ಜೊತೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವ ದಾದಿಯರ ಮತ್ತು ಶುಶ್ರೂಷಕಿಯರ ಸೇವೆಯ ಮಹತ್ವವನ್ನು ವಿಶ್ವದ ನಾಯಕರಿಗೆ ಮನದಟ್ಟು ಮಾಡಬೇಕಾದ ವಿಶೇಷ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ಈಗ ಇಡೀ ವಿಶ್ವವನ್ನು ಕಾಡಿ, ಮನುಕುಲವನ್ನು ನುಂಗಿ ನೀರು ಕುಡಿಯುವತ್ತ ದಾಪುಗಾಲು ಇಡುತ್ತಿರುವ ಕೋವಿಡ್-19 ಎಂಬ ವೈರಾಣುವಿನ ನಿಯಂತ್ರಣದಲ್ಲಿ, ವೈದ್ಯರಷ್ಟೇ ಪ್ರಮುಖ ಪಾತ್ರ ವಹಿಸುತ್ತಿರುವ ದಾದಿಯರು ಮತ್ತು ಶುಶ್ರೂಷಕಿಯರ ಸೇವೆಯನ್ನು ಸ್ಮರಿಸಿ ಅವರ ರಕ್ಷಣೆಯತ್ತಲೂ ಗಮನಹರಿಸಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ನಾವಿದ್ದೇವೆ. ವೈರಾಣುವಿನಿಂದ ದಾದಿಯರನ್ನು ರಕ್ಷಿಸುವುದರ ಜೊತೆಗೆ ಅನಕ್ಷರಸ್ಥ, ಅವಿವೇಕಿ, ಬುದ್ದಿಹೀನ, ಲಜ್ಜೇಗೇಡಿ, ಧರ್ಮಾಂಧ ರೋಗಿಗಳು ಮತ್ತು ರೋಗಿಗಳ ಆಪ್ತರಿಂದ, ದಾದಿಯರು, ಶುಶ್ರೂಷಕಿಯರನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಆಡಳಿತಾರೂಢ ನಾಯಕರ ಮೇಲಿದೆ.



 

1950 ಎಪ್ರಿಲ್ 7ರಂದು ಆರಂಭವಾದ ಈ ಆಚರಣೆ, ಪ್ರತಿ ವರ್ಷ ಯಾವುದಾದರೊಂದು ವಿಶೇಷ ಧ್ಯೇಯವಾಕ್ಯ ಇಟ್ಟುಕೊಂಡು ಆಚರಿಸಲಾಗುತ್ತದೆ. 2017 ರಲ್ಲಿ ‘ಖಿನ್ನತೆಯನ್ನು ಸೋಲಿಸಿ’ ಎಂಬ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಆಚರಿಸಲಾಗಿತ್ತು. 2019 ರ ಧೇಯವಾಕ್ಯ ‘ಎಲ್ಲೆಲ್ಲಿಯೂ ಎಲ್ಲರಿಗೂ ಆರೋಗ್ಯ,’ ಎಂಬ ಉದ್ದೇಶವನ್ನು ಇಟ್ಟುಕೊಂಡು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಜಾಗತಿಕ ಜಗತ್ತಿನ 700 ಕೋಟಿ ಜನಸಂಖ್ಯೆಯ ಅರ್ಧದಷ್ಟು ಜನರು ಸೂಕ್ತ ವೈದ್ಯಕೀಯ ಸೌಲಭ್ಯ ದೊರಕಿಸುವುದೇ ವಿಶ್ವಸಂಖ್ಯೆಯ ಆದ್ಯತೆಯಾಗಿದೆ. ವಿಶ್ವಸಂಖ್ಯೆ ತನ್ನ 70ನೇ ವಾರ್ಷಿಕೋತ್ಸವವನ್ನು ಆಚರಿಸುವ ಈ ಸಂದರ್ಭದಲ್ಲಿ ‘ಸರ್ವರಿಗೂ ಆರೋಗ್ಯ’ ಎಂಬ ಘೋಷಣೆಯಡಿಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಭಾಗ್ಯ ಕಲ್ಪಿಸುವ ಕನಸನ್ನು ಹೊಂದಿದೆ. ಜಾಗತಿಕ ಜನಸಂಖ್ಯೆಯಲ್ಲಿನ 100 ಮಿಲಿಯನ್ ಮಂದಿ ಬಡತನ ರೇಖೆಗಿಂತಲೂ ಕೆಳಗಿನವರಾಗಿದ್ದು, ಅಧಿಕ ವೈದ್ಯಕೀಯ ವೆಚ್ಚದ ಕಾರಣದಿಂದಾಗಿ, ಬಡತನ ರೇಖೆಯು ಕೆಳಗೆಯೇ ಉಳಿಯುವಂತಾಗಿದೆ. ದುಡಿದ ಹಣವೆಲ್ಲಾ ಆರೋಗ್ಯ ಸಂಬಂಧಿ ವೈದ್ಯಕೀಯ ವೆಚ್ಚಕ್ಕಾಗಿ ವ್ಯಯಿಸುವುದರಿಂದ ದಿನವೊಂದರಲ್ಲಿ ಕನಿಷ್ಟ 2 ಡಾಲರ್‌ನಲ್ಲಿ ಬದುಕಬೇಕಾದ ಅನಿವಾರ್ಯತೆ ಹೊಂದಿದ್ದಾರೆ


ಇನ್ನೂ ಜಾಗತಿಕ ಜನಸಂಖ್ಯೆಯು 800 ಮಿಲಿಯನ್ ಮಂದಿ (ಜನಸಂಖ್ಯೆಯು 12 ಶೇಕಡಾದಷ್ಟು) ತಮ್ಮ ಸಂಪಾದನೆಯ 10 ಶೇಕಡಾದಷ್ಟು ಆರೋಗ್ಯಕ್ಕಾಗಿ ವ್ಯಯಿಸುತ್ತಾರೆ ಎಂದು ವಿಶ್ವಸಂಸ್ಥೆಯು ವರದಿಗೊಳಿಸಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಅಮೇರಿಕಾ, ಯುರೋಪ್, ಏಷ್ಯಾಖಂಡದ ಕೆಲವೊಂದು ದೇಶಗಳು ಈ ರೀತಿಯ ವೆಚ್ಚವನ್ನು ಸರಿದೂಗಿಸುವ ಸಾಮರ್ಥ್ಯ ಹೊಂದಿದೆ. ಆದರೆ ಬಡರಾಷ್ಟ್ರಗಳಾದ ಆಫ್ರಿಕಾ, ಲಿಬಿಯಾ ಮತ್ತು ಏಷ್ಯಾಖಂಡದ ಕೆಲವು ರಾಷ್ಟ್ರಗಳು ಆರೋಗ್ಯಕ್ಕಾಗಿ ಹೆಚ್ಚಿನ ಹಣ ವ್ಯಯಿಸಲಾಗದಿರುವುದು ಜಾಗತಿಕ ಜಗತ್ತಿನ ದುರಂತವೆಂದರೂ ತಪ್ಪಲ್ಲ. 2018ರ ಧ್ಯೇಯವೆಂದರೆ ‘ಎಲ್ಲರಿಗೂ ಎಲ್ಲೆಲ್ಲೂ ಆರೋಗ್ಯ’ ಎಂದಾಗಿದ್ದು, ಇದರ ಆಶಯದಡಿ ಜಗತ್ತಿನ ಎಲ್ಲರಿಗೂ ಅಗತ್ಯವಿದ್ದಾಗಲ್ಲೆಲ್ಲ ಉನ್ನತ ವೈದ್ಯಕೀಯ ಸೌಲಭ್ಯ ಯಾವುದೇ ಆರ್ಥಿಕ ಅಡಚಣೆ ಇಲ್ಲದೆ ಸಿಗಬೇಕು ಎಂಬುದಾಗಿತ್ತು.


logoblog

Thanks for reading ವಿಶ್ವ ಆರೋಗ್ಯ ದಿನ – ಎಪ್ರಿಲ್ 7

Previous
« Prev Post

No comments:

Post a Comment

Popular Posts