Footer Logo

Tuesday, May 4, 2021

2672 KSRP PC ನೇಮಕ: ವಿವಿಧ ವಲಯಕ್ಕೆ ಭಾಗಶಃ ಅಂತಿಮ ಆಯ್ಕೆಪಟ್ಟಿ ಪ್ರಕಟ

  ADMIN       Tuesday, May 4, 2021

 ಕರ್ನಾಟಕ ಪೊಲೀಸ್ ಇಲಾಖೆಯು 2672 ವಿಶೇಷ ರಿಸರ್ವ್‌ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವಿವಿಧ ವಲಯಗಳಿಗೆ ಭಾಗಶಃ ಅಂತಿಮ ಆಯ್ಕೆಪಟ್ಟಿಗಳನ್ನು ಬಿಡುಗಡೆ ಮಾಡಿದೆ. 2020ನೇ ಸಾಲಿನ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಸದರಿ ಭಾಗಶಃ ಅಂತಿಮ ಆಯ್ಕೆಪಟ್ಟಿಗಳನ್ನು ಕೆಎಸ್‌ಪಿ ವೆಬ್‌ಸೈಟ್‌ನಲ್ಲಿ ಚೆಕ್‌ ಮಾಡಬಹುದು.



ಪೊಲೀಸ್‌ ಇಲಾಖೆಯು ಪ್ರಸ್ತುತ ಬೆಂಗಳೂರು ವಲಯದ 4ನೇ ಪಡೆ ಮತ್ತು 3ನೇ ಪಡೆ ಕೆಎಸ್‌ಆರ್‌ಪಿಯ ವಿಶೇಷ ಮೀಸಲು ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಭಾಗಶಃ ಅಂತಿಮ ಆಯ್ಕೆಪಟ್ಟಿಯನ್ನು ಮಾತ್ರ ಪ್ರಸ್ತುತ ಪ್ರಕಟಿಸಲಾಗಿದೆ.

ಅಭ್ಯರ್ಥಿಗಳು ಸದರಿ ಆಯ್ಕೆಪಟ್ಟಿಗಳನ್ನು ಚೆಕ್‌ ಮಾಡಲು ಅಫೀಶಿಯಲ್ ವೆಬ್‌ಸೈಟ್‌ http://srpc20.ksp-online.in/index.aspx?ReturnUrl=%2f ಗೆ ಭೇಟಿ ನೀಡಿ. ಅಥವಾ ಈ ಕೆಳಗಿನ ಡೈರೆಕ್ಟ್‌ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಚೆಕ್‌ ಮಾಡಬಹುದು.

ಪೊಲೀಸ್ ಇಲಾಖೆಯು 2672 ವಿಶೇಷ ರಿಸರ್ವ್‌ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಯನ್ನು 2020 ರ ನವೆಂಬರ್ 29 ರಂದು ನಡೆಸಿತ್ತು. ನಂತರ 2021 ರ ಜನವರಿ ತಿಂಗಳಲ್ಲಿ ಸಹಿಷ್ಣುತೆ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಿತ್ತು. ಪ್ರಸ್ತುತ ತಾತ್ಕಾಲಿಕ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ವಲಯವಾರು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ, ಒಂದೊಂದೆ ವಲಯಗಳಿಗೆ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗುತ್ತಿದೆ.

Partial Final Select List, KSRP 4th BN., Bengaluru

Partial Final Select List, KSRP 3th BN., Bengaluru


ಕರ್ನಾಟಕ ಪೊಲೀಸ್‌ ಇಲಾಖೆಯು ಮೇ 07, 2020 ರ ಅಧಿಸೂಚನೆಯ ವಿಶೇಷ ರಿಸರ್ವ್ ಸಬ್‌-ಇನ್ಸ್‌ಪೆಕ್ಟರ್ (ಕೆಎಸ್‌ಆರ್‌ಪಿ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಈ ಪರಿಷ್ಕೃತ ಪಟ್ಟಿಯನ್ನು ಚೆಕ್‌ ಮಾಡಲು ಪೊಲೀಸ್ ಇಲಾಖೆಯ ಅಫೀಶಿಯಲ್‌ ವೆಬ್‌ಸೈಟ್‌ಗೆ ಭೇಟಿ ನೀಡಿರಿ.

ಇಲಾಖೆಯು ದಿನಾಂಕ 07-05-2021ರ ಅಧಿಸೂಚನೆಯನ್ವಯ ವಿಶೇಷ ರಿಸರ್ವ್‌ ಸಬ್‌-ಇನ್ಸ್‌ಪೆಕ್ಟರ್ (ಕೆಎಸ್‌ಆರ್‌ಪಿ) (ಪುರುಷ) ಹಾಗೂ ಸೇವಾನಿರತ-40 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಂಡು ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು 2021 ರ ಮಾರ್ಚ್‌ 03 ರಂದು ಪ್ರಕಟಿಸಲಾಗಿತ್ತು. ನಂತರ ಈ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯವನ್ನು ಕೈಗೊಳ್ಳಲಾಗಿತ್ತು. ನಂತರ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ವರದಿಯನ್ನು ಸಲ್ಲಿಸಿದ ಮೇರೆಗೆ ಸದರಿ ವರದಿಯಾನುಸಾರ ಅಂತಿಮ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು.

ಆದರೆ ಅಂತಿಮ ಪಟ್ಟಿಯಲ್ಲಿನ ಒಬ್ಬ ಅಭ್ಯರ್ಥಿ ಆರ್‌ಎಸ್‌ಐ ಹುದ್ದೆಗೆ ಆಯ್ಕೆಯಾದ ಕಾರಣ ಅವರ ನೇಮಕಾತಿ ರದ್ದುಗೊಳಿಸಿ, ಹಾಗೂ ಇತರೆ ಇಬ್ಬರು ಅಭ್ಯರ್ಥಿಗಳು ವಿಶೇಷ ರಿಸರ್ವ್‌ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗೆ ಸೇರಲು ಇಚ್ಛೆ ಇರುವುದಿಲ್ಲ ಎಂದು ತಿಳಿಸಿದ ಕಾರಣ, ಉಂಟಾದ ರಿಕ್ತ ಸ್ಥಾನಗಳ ಭರ್ತಿ ಸಲುವಾಗಿ ಆಯ್ಕೆಪಟ್ಟಿಯನ್ನು ಮೆರಿಟ್ ಹಾಗೂ ಹುದ್ದೆಗಳ ಅದ್ಯತೆಯನುಸಾರ ಪರಿಷ್ಕರಿಸಲಾಗಿದೆ. ಅದರಂತೆ ಇದೀಗ ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದೆ.
logoblog

Thanks for reading 2672 KSRP PC ನೇಮಕ: ವಿವಿಧ ವಲಯಕ್ಕೆ ಭಾಗಶಃ ಅಂತಿಮ ಆಯ್ಕೆಪಟ್ಟಿ ಪ್ರಕಟ

Previous
« Prev Post

No comments:

Post a Comment

Popular Posts