Footer Logo

Friday, January 21, 2022

ಯುಪಿಎಸ್‌ಸಿ ಪರೀಕ್ಷೆಗೆ ಸ್ವಯಂ ಅಧ್ಯಯನ ಆರಂಭಿಸುವುದು ಹೇಗೆ?

  ADMIN       Friday, January 21, 2022

 ಯುಪಿಎಸ್‌ಸಿ ಪರೀಕ್ಷೆಗೆ ಸ್ವಯಂ ಅಧ್ಯಯನ ಆರಂಭಿಸುವುದು ಹೇಗೆ?



ಯಾವುದೇ ಪರೀಕ್ಷೆಗಳಿಗೆ ಆದರೂ ಕೋಚಿಂಗ್ ಪಡೆಯಲೇ ಬೇಕು ಎಂಬ ನಿಯಮವಿಲ್ಲ. ಹಾಗೆ ಅತೀ ಅಗತ್ಯತೆಯೂ ಇಲ್ಲ. ಸ್ವಯಂ ಅಧ್ಯಯನ ತಯಾರಿ, ನಿಗದಿತ ಪ್ಲಾನ್‌ ಹಾಕಿಕೊಂಡು ಓದಲು ಆರಂಭಿಸಿದರೆ ಯಶಸ್ಸು ಖಂಡಿತ. ಆದರೆ ಹಾಕಿಕೊಂಡ ಟೈಮ್‌ ಟೇಬಲ್‌ ಅನ್ನು ಪ್ರಮಾಣಿಕವಾಗಿ ಫಾಲೋ ಮಾಡಬೇಕಷ್ಟೆ. ಯುಪಿಎಸ್‌ಸಿ ಪರೀಕ್ಷೆಗಳಿಗೆ ಸ್ವಯಂ ಅಧ್ಯಯನ ತಯಾರಿ ಆರಂಭಿಸಲು ಈ ಕೆಳಗೆ ಒಂದಿಷ್ಟು ಸಲಹೆಗಳನ್ನು ಸರಳವಾಗಿ ತಿಳಿಸಲಾಗಿದೆ

ಯುಪಿಎಸ್‌ಸಿ ಪರೀಕ್ಷೆಗೆ ಸ್ವಯಂ ಅಧ್ಯಯನಕ್ಕೆ ಸಲಹೆಗಳು ಈ ಕೆಳಗಿನಂತಿವೆ.


1. ಉತ್ತಮ ಇಂಟರ್ನೆಟ್ ಸಂಪರ್ಕ ಪಡೆಯಿರಿ.


2. ಮೊದಲಿಗೆ ಪ್ರಿಲಿಮ್ಸ್‌ ಪರೀಕ್ಷೆಗೆ ತಯಾರಿ ನಡೆಸಬೇಕು. ಪ್ರಮುಖ ಸಬ್ಜೆಕ್ಟ್‌ಗಳಾದ ಪೊಲಿಟಿ, ಜಿಯೋಗ್ರಫಿ, ಅರ್ಥಶಾಸ್ತ್ರ, ಇತಿಹಾಸ ಓದಲು ಆರಂಭಿಸಿ.


3. ಪ್ರಿಲಿಮ್ಸ್‌ ಗೆ ಓದಲು ಆರಂಭಿಸಿದಾಗಲೇ ಜೊತೆಗೆ ನಿಮ್ಮ ಐಚ್ಛಿಕ ವಿಷಯ ಯಾವುದು ಎಂಬುದನ್ನು ನಿರ್ಧರಿಸಿಕೊಳ್ಳಿ. ಪ್ರಿಲಿಮ್ಸ್‌ ಜೊತೆಗೆಯೇ ಐಚ್ಛಿಕ ವಿಷಯವನ್ನು ಓದಿರಿ.

4. ಪ್ರಿಲಿಮ್ಸ್‌ ಪಾಸ್‌ ನಂತರ ಮುಖ್ಯ ಪರೀಕ್ಷೆಗೆ ಸಿದ್ಧತೆ ಆರಂಭಿಸಿ. ಈ ಹಂತದಲ್ಲಿ ಮೊದಲಿಗೆ ಪಠ್ಯಕ್ರಮದಲ್ಲಿರುವಂತೆ ಪ್ರತಿ ಟಾಪಿಕ್‌ಗೆ ಶಾರ್ಟ್‌ ನೋಟ್ಸ್‌ ಮಾಡಿರಿ. ನಂತರ ಯುಪಿಎಸ್‌ಸಿ ಮೇನ್ಸ್‌ ಪರೀಕ್ಷೆಯ ಟಾಪರ್ಸ್‌ಗಳ ಉತ್ತರ ಪ್ರತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಿ. ಅವರ ಟೆಕ್ನಿಕ್‌ಗಳನ್ನು ಅವಲೋಕನ ಮಾಡಿರಿ. ನಿಮ್ಮ ಸ್ವಂತ ಉತ್ತರ ಬರೆಯುವುದನ್ನು ಪ್ರ್ಯಾಕ್ಟೀಸ್‌ ಮಾಡಿರಿ.



5. ಪ್ರಿಲಿಮ್ಸ್‌ ಪರೀಕ್ಷೆಗೆ 3 ತಿಂಗಳ ಸಿದ್ಧತೆ ಕನಿಷ್ಠ ಬೇಕು. ಐಚ್ಛಿಕ ವಿಷಯದ ಓದಿಗೆ ಕನಿಷ್ಠ ಮೂರು ತಿಂಗಳು ಬೇಕು. ಮುಖ್ಯ ಪರೀಕ್ಷೆಗೆ ಮೂರು ತಿಂಗಳು ಓದುವುದು ಸೂಕ್ತ. ಕನಿಷ್ಠ ಮೂರು ತಿಂಗಳು ಪ್ರಚಲಿತ ವಿದ್ಯಮಾನಗಳ ಬಗ್ಗೆ ಓದಿಕೊಳ್ಳಬೇಕು. ಇಂಟರ್ನೆಟ್‌ ಸೋರ್ಸ್‌ ಅನ್ನು ಬಳಸಿಕೊಂಡು ಉತ್ತಮವಾಗಿ ಅಧ್ಯಯನ ನಡೆಸಬಹುದು. ಜೊತೆಗೆ ಪ್ರಿಲಿಮ್ಸ್‌ಗೆ ಓದಿದ ಸೋರ್ಸ್‌ ಅನ್ನು ಒಮ್ಮೆ ಪುನರಾವರ್ತನೆ ಮಾಡಬೇಕು. ಇರುವ ಕಾಲಾವಕಾಶದಲ್ಲಿಯೇ ಹೆಚ್ಚು ಟೆಸ್ಟ್‌ ಸೀರೀಸ್‌ಗಳನ್ನು ಪ್ರ್ಯಾಕ್ಟೀಸ್ ಮಾಡಬೇಕು.

6. ಪ್ರಿಲಿಮ್ಸ್‌ ನಂತರ, ಮೇನ್ಸ್ ಪಠ್ಯಕ್ರಮಕ್ಕೆ ತಕ್ಕ ಶಾರ್ಟ್‌ ನೋಟ್ಸ್‌ ಅನ್ನು ಪುನರಾವರ್ತನೆ ಮಾಡಬೇಕು. ಹೆಚ್ಚಾಗಿ ಬರವಣಿಗೆಯನ್ನು ಪ್ರಾಕ್ಟೀಸ್ ಮಾಡಬೇಕು. ಹಲವು ಸೋರ್ಸ್‌ಗಳನ್ನು ಓದಲು ಹೋಗಿ ಕನ್‌ಫ್ಯೂಸ್‌ ಆಗುವ, ಸಮಯ ಹಾಳಾಗುವುದಕ್ಕೆ ಅವಕಾಶ ಮಾಡಿಕೊಳ್ಳಬಾರದು.


7. ಪ್ರಬಂಧ ಮತ್ತು ನೀತಿಶಾಸ್ತ್ರಕ್ಕೆ ಪ್ರಿಲಿಮ್ಸ್‌ ನಂತರವೇ ಸಿದ್ಧತೆ ಆರಂಭಿಸಬೇಕು. ಈ ವಿಭಾಗಕ್ಕೆ ಟಾಪರ್‌ಗಳ ಉತ್ತರ ಪತ್ರಿಕೆ ರೆಫರ್‌ ಮಾಡುವುದರಿಂದ ಐಡಿಯಾಗಳು ತಿಳಿಯುತ್ತವೆ.

8. ಸಂದರ್ಶನಕ್ಕೆ ಸಿದ್ಧತೆ ನಡೆಸಲು ಟೆಲಿಗ್ರಾಮ್ ಮತ್ತು ಮೊಬೈಲ್‌ ಅಪ್ಲಿಕೇಶನ್‌ಗಳನ್ನು ಬಳಸಿ. ಹೆಚ್ಚು ಸಂದರ್ಶನ ಸಂಭಾಷಣೆಗಳನ್ನು ಕೇಳಿರಿ. ಅಣಕು ಸಂದರ್ಶನಗಳನ್ನು ಪ್ರ್ಯಾಕ್ಟೀಸ್‌ ಮಾಡಿರಿ


ಯಾವುದೇ ಪರೀಕ್ಷೆಗಳನ್ನು ಸುಲಭವಾಗಿ ಪಾಸ್‌ ಮಾಡಲು ಯಾವುದೇ ಹಾದಿಗಳಿಲ್ಲ. ಹೆಚ್ಚಿನ ಅಭ್ಯಾಸ ಮತ್ತು ಪರಿಶ್ರಮದಿಂದ ಓದುವುದೊಂದೇ ಪ್ರತಿಫಲದ ಹಾದಿ. ಇಂದು ಇಂಟರ್ನೆಟ್‌ ಸಂಪರ್ಕ ವ್ಯವಸ್ಥೆಯೊಂದಿದ್ದರೆ, ನಿರ್ಧಿಷ್ಟ ಗುರಿ ಗಟ್ಟಿಯಾಗಿದ್ದರೇ ಯಾವುದೇ ಸ್ಥಳದಿಂದಲೂ ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಬಳಕೆಯಂದ ಪರೀಕ್ಷೆಗೆ ತಯಾರಿ ನಡೆಸಬಹುದು.



logoblog

Thanks for reading ಯುಪಿಎಸ್‌ಸಿ ಪರೀಕ್ಷೆಗೆ ಸ್ವಯಂ ಅಧ್ಯಯನ ಆರಂಭಿಸುವುದು ಹೇಗೆ?

Previous
« Prev Post

No comments:

Post a Comment

Popular Posts