Footer Logo

Tuesday, August 30, 2022

DRDO Recruitment 2022: 1901 ಹುದ್ದೆಗಳಿಗೆ ಅರ್ಜಿ ಆಹ್ವಾನ., ಬಿಎಸ್ಸಿ, ಡಿಪ್ಲೊಮ ವಿದ್ಯಾರ್ಹತೆ

  ADMIN       Tuesday, August 30, 2022

 DRDO Recruitment 2022: 1901 ಹುದ್ದೆಗಳಿಗೆ ಅರ್ಜಿ ಆಹ್ವಾನ., ಬಿಎಸ್ಸಿ, ಡಿಪ್ಲೊಮ ವಿದ್ಯಾರ್ಹತೆ



DRDO CEPTAM Recruitment 2022 Notification: ಡಿಫೆನ್ಸ್‌ ರಿಸರ್ಚ್‌ ಮತ್ತು ಡೆವಲಪ್ಮೆಂಟ್ ಆರ್ಗನೈಜೇಶನ್, ಸೆಂಟರ್ ಫಾರ್ ಪರ್ಸೊನೆಲ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಇದೀಗ 1901 ಡಿಫೆನ್ಸ್‌ ರಿಸರ್ಚ್‌ ಟೆಕ್ನಿಕಲ್ ಕೇಡರ್‌ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ.


ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ CEPTAM 10 ಡಿಫೆನ್ಸ್‌ ರಿಸರ್ಚ್‌ ಟೆಕ್ನಿಕಲ್ ಕೇಡರ್‌ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಒಟ್ಟು 1901 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೀನಿಯರ್ ಟೆಕ್ನಿಕಲ್ ಅಸಿಸ್ಟಂಟ್ ಬಿ ಮತ್ತು ಟೆಕ್ನೀಷಿಯನ್ ಎ ಹುದ್ದೆಗಳನ್ನು ಈ ನೇಮಕಾತಿ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತಿದೆ. ಆಸಕ್ತರು ಸೆಪ್ಟೆಂಬರ್ 03 ರಿಂದ 23, 2022 ರವರೆಗೆ ಆನ್‌ಲೈನ್‌ ಅರ್ಜಿ ಸಲ್ಲಿಸಿ.


ಉದ್ಯೋಗ ಸಂಸ್ಥೆ : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ

ಹುದ್ದೆಗಳ ಹೆಸರು : ಸೀನಿಯರ್ ಟೆಕ್ನಿಕಲ್ ಅಸಿಸ್ಟಂಟ್ ಬಿ ಮತ್ತು ಟೆಕ್ನೀಷಿಯನ್ ಎ ಹುದ್ದೆ

ಒಟ್ಟು ಹುದ್ದೆಗಳ ಸಂಖ್ಯೆ : 1901


DRDO Recruitment 2022 ವಿದ್ಯಾರ್ಹತೆ: 

ಬಿಎಸ್ಸಿ / ಡಿಪ್ಲೊಮ ಅನ್ನು ಹುದ್ದೆಯ ವಿಭಾಗಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪಾಸ್ ಮಾಡಿರಬೇಕು.


DRDO Recruitment 2022 ವಯೋಮಿತಿ

ಸೆಪ್ಟೆಂಬರ್ 23, 2022ಕ್ಕೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 28 ವರ್ಷ ವಯೋಮಿತಿ ಮೀರಿರಬಾರದು. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.


DRDO Recruitment 2022 ಅರ್ಜಿ ಸಲ್ಲಿಕೆ ಹೇಗೆ?

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು DRDO ಅಧಿಕೃತ ವೆಬ್‌ಸೈಟ್ www.drdo.gov.in ಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ವೇಳೆ ಅಭ್ಯರ್ಥಿಗಳು ಟೈಯರ್-1 ಪರೀಕ್ಷೆ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಆರ್ಜಿ ಸಲ್ಲಿಸುವ ಮುನ್ನ ಅಗತ್ಯ ಸ್ಕ್ಯಾನ್‌ ಕಾಪಿಗಳನ್ನು ರೆಡಿ ಮಾಡಿಕೊಂಡಿರಬೇಕು.


DRDO Recruitment 2022 ಆಯ್ಕೆ ವಿಧಾನ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಟೈಯರ್-1, ಟೈಯರ್-2 ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಿ, ಟೈಯರ್-2 ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದಲ್ಲಿ ಆಯ್ಕೆ ಪ್ರಕ್ರಿಯೆ ಮುಂದುವರೆಸಲಾಗುತ್ತದೆ.

ಎರಡು ಹಂತದ ಪರೀಕ್ಷೆಗಳ ಅವಧಿ 90 ನಿಮಿಷಗಳು.

DRDO Recruitment 2022 ಟೈಯರ್-1 ಪರೀಕ್ಷೆ

100 ಅಂಕಗಳಿಗೆ ನಡೆಸಲಾಗುತ್ತದೆ. ಜೆನೆರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್ - 35, ಪ್ರಚಲಿತ ವಿದ್ಯಮಾನಗಳು - 30, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಅಂಡ್ ನ್ಯುಮರಿಕಲ್ ಎಬಿಲಿಟಿ -35 ಅಂಕಗಳಿಗೆ ಪ್ರಶ್ನೆಗಳು ಇರುತ್ತವೆ.


DRDO Recruitment 2022 ಟೈಯರ್-2 ಪರೀಕ್ಷೆ

100 ಅಂಕಗಳಿಗೆ ನಡೆಸಲಾಗುತ್ತದೆ. ಜೆನೆರಲ್ ಸೈನ್ಸ್‌ -40, ಜೆನೆರಲ್ ಮ್ಯಾಥ್ಸ್‌ - 40, ಜೆನೆರಲ್ ಇಂಗ್ಲೀಷ್ - 20 ಅಂಕಗಳಿಗೆ ಪ್ರಶ್ನೆಗಳು ಇರುತ್ತವೆ.


DRDO Recruitment 2022 ಪರೀಕ್ಷಾ ಕೇಂದ್ರಗಳು

ದೇಶದಾದ್ಯಂತದ ಒಟ್ಟು 42 ಕೇಂದ್ರಗಳಲ್ಲಿ ಟೈಯರ್-1 ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಗೆ ಅಭ್ಯರ್ಥಿಗಳು ಕೇಂದ್ರವನ್ನು ಆಯ್ಕೆ ಮಾಡಬಹುದು. ಆದರೆ ಟೈಯರ್-2 ಪರೀಕ್ಷೆಗೆ ಡಿಆರ್‌ಡಿಒ ನಿಗದಿಪಡಿಸಿದ ಕೇಂದ್ರದಲ್ಲೇ ಪರೀಕ್ಷೆಗೆ ಹಾಜರಾಗಬೇಕಿರುತ್ತದೆ.

ಕರ್ನಾಟಕದಲ್ಲಿ ಮೈಸೂರು ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬಹುದು.


DRDO Recruitment 2022 ವೇತನ ಶ್ರೇಣಿ ರೂ.ಗಳಲ್ಲಿ

ಸೀನಿಯರ್ ಟೆಕ್ನಿಕಲ್ ಅಸಿಸ್ಟಂಟ್ ಬಿ ಹುದ್ದೆ : ರೂ.35,400-1,12,400 (7ನೇ ಸಿಪಿಸಿ ಪೇ ಮೆಟ್ರಿಕ್‌ ಪ್ರಕಾರ, ಇತರೆ ಭತ್ಯೆಗಳು ಇರುತ್ತವೆ)

ಟೆಕ್ನೀಷಿಯನ್ ಎ : ರೂ.19,900-63,200 (7ನೇ ಸಿಪಿಸಿ ಪೇ ಮೆಟ್ರಿಕ್‌ ಪ್ರಕಾರ, ಇತರೆ ಭತ್ಯೆಗಳು ಇರುತ್ತವೆ)


DRDO Recruitment 2022  ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅರ್ಜಿಗೆ ಆರಂಭಿಕ ದಿನಾಂಕ : 03-09-2022

ಆನ್‌ಲೈನ್‌ ಅರ್ಜಿಗೆ ಕೊನೆ ದಿನಾಂಕ : 23-09-2022

ಟೈಯರ್-1 ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ : ಶೀಘ್ರದಲ್ಲಿ ವೆಬ್‌ನಲ್ಲಿ ಪ್ರಕಟಿಸಲಾಗುತ್ತದೆ.


OFFICIAL WEBSITE LINK


logoblog

Thanks for reading DRDO Recruitment 2022: 1901 ಹುದ್ದೆಗಳಿಗೆ ಅರ್ಜಿ ಆಹ್ವಾನ., ಬಿಎಸ್ಸಿ, ಡಿಪ್ಲೊಮ ವಿದ್ಯಾರ್ಹತೆ

Previous
« Prev Post

No comments:

Post a Comment

Popular Posts