Footer Logo

Tuesday, August 30, 2022

ಭಾರತೀಯ ಸೇನಾಪಡೆ ಟೆಕ್ನಿಕಲ್ ಎಂಟ್ರಿ ಸ್ಕೀಮ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ: 12th ವಿದ್ಯಾರ್ಹತೆ

  ADMIN       Tuesday, August 30, 2022

 ಭಾರತೀಯ ಸೇನಾಪಡೆ ಟೆಕ್ನಿಕಲ್ ಎಂಟ್ರಿ ಸ್ಕೀಮ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ: 12th ವಿದ್ಯಾರ್ಹತೆ



Army TES Entry 2022 Notification : ಭಾರತೀಯ ಸೇನಾಪಡೆಯು ಟೆಕ್ನಿಕಲ್ ಎಂಟ್ರಿ ಸ್ಕೀಮ್ ಕೋರ್ಸ್‌ (10+2) ಅನ್ನು ಜನವರಿ 2023 ರಿಂದ ಆರಂಭಿಸಲಿದೆ. ಈ ಕೋರ್ಸ್‌ಗೆ ಸೇರಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


ಭಾರತೀಯ ಸೇನಾಪಡೆಯು ಟೆಕ್ನಿಕಲ್ ಎಂಟ್ರಿ ಸ್ಕೀಮ್‌ ಕೋರ್ಸ್‌ (10+2) -48 ಅನ್ನು 2023 ರ ಜನವರಿ ತಿಂಗಳಿಂದ ಆರಂಭಿಸಲಿದೆ. ಅವಿವಾಹಿತ ಪುರುಷ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ವಿದ್ಯಾರ್ಹತೆ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿಯಬಹುದು.


Army TES Entry 2022  ವಿದ್ಯಾರ್ಹತೆ:

- ಅಭ್ಯರ್ಥಿಗಳು ಫಿಸಿಕ್ಸ್‌, ಕೆಮಿಸ್ಟ್ರಿ, ಗಣಿತ ವಿಷಯಗಳು ಕಡ್ಡಾಯವಾಗಿ ಇರುವ ಪಿಯುಸಿ / 12ನೇ ತರಗತಿ ಕೋರ್ಸ್‌ ಅನ್ನು ಕನಿಷ್ಠ 60 ಅಂಕಗಳೊಂದಿಗೆ ಪಾಸ್ ಮಾಡಿರಬೇಕು.

- ಜೆಇಇ ಮೇನ್ಸ್‌ 2022 ಪರೀಕ್ಷೆ ಬರೆದಿರಬೇಕು.


 Army TES Entry 2022  ವಯೋಮಿತಿ ಅರ್ಹತೆಗಳು:

- ಕನಿಷ್ಠ 16.1/2 ವರ್ಷ ವಯಸ್ಸಾಗಿರಬೇಕು.


Army TES Entry 2022  ಅಭ್ಯರ್ಥಿಗಳು ಆಯ್ಕೆಯಾಗಿ 4 ವರ್ಷ ಯಶಸ್ವಿಯಾಗಿ ಕೋರ್ಸ್‌ ಮುಗಿದಲ್ಲಿ, ನಂತರ ರ್ಯಾಂಕ್ ಆಧಾರದಲ್ಲಿ ಲೆಫ್ಟಿನೆಂಟ್‌ ಹುದ್ದೆಗೆ ಪರ್ಮನೆಂಟ್‌ ಕಮಿಷನ್‌ ಮೂಲಕ ನೇಮಕ ಮಾಡಲಾಗುತ್ತದೆ. ಒಟ್ಟು 5 ವರ್ಷ ತರಬೇತಿ ನೀಡಲಾಗುತ್ತದೆ.


Army TES Entry 2022  ರ‍್ಯಾಂಕ್ / ಪೇ ಲೆವೆಲ್ / ವೇತನ ಶ್ರೇಣಿ ರೂ.ಗಳಲ್ಲಿ


ಲೆಫ್ಟಿನಂಟ್(ಲೆವೆಲ್ 10 ): Rs.56,100 - 1,77,500

ಕ್ಯಾಪ್ಟನ್ (ಲೆವೆಲ್ 10B) : Rs.61,300 - 1,93,900

ಮೇಜರ್ (ಲೆವೆಲ್ 11) : Rs.69,400 - 2,07,200

ಲೆಫ್ಟಿನಂಟ್ ಕಲೋನೆಲ್ (ಲೆವೆಲ್ 12A ): Rs.1,21,200 - 2,12,400

ಕಲೋನೆಲ್ (ಲೆವೆಲ್ 13): Rs.1,30,600 - 2,15,900

ಬ್ರಿಗೇಡಿಯರ್ (ಲೆವೆಲ್ 13A) : Rs.1,39,600 - 2,17,600

ಮೇಜರ್ ಜೆನೆರಲ್ (ಲೆವೆಲ್ 14) : Rs.1,44,200 - 2,17,600

ಲೆಫ್ಟಿನಂಟ್ ಜೆನೆರಲ್ / ಹೆಚ್‌ಎಜಿ ಸ್ಕೇಲ್ (ಲೆವೆಲ್ 15) : Rs.1,82,200 - 2,24,100


Army TES Entry 2022  ಪ್ರಮುಖ ದಿನಾಂಕಗಳು:


ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 22-08-2022

ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 21-09-2022 ರ ಮಧ್ಯಾಹ್ನ 03 ಗಂಟೆವರೆಗೆ.



Army TES Entry 2022  ಅರ್ಜಿ ಸಲ್ಲಿಕೆ ಹೇಗೆ?


- ಆರ್ಮಿ ವೆಬ್‌ ವಿಳಾಸ www.joinindianarmy.nic.in ಕ್ಕೆ ಭೇಟಿ ನೀಡಿ.

- ಇಲ್ಲಿ 'Online Application' ಎಂಬಲ್ಲಿ ಕ್ಲಿಕ್ ಮಾಡಿ.

- ನಂತರ ಓಪನ್ ಆಗುವ ಪೇಜ್‌ನಲ್ಲಿ ಅಗತ್ಯ ಮಾಹಿತಿಗಳನ್ನು ನೀಡಿ, ಅರ್ಜಿ ಸಲ್ಲಿಸಿ

logoblog

Thanks for reading ಭಾರತೀಯ ಸೇನಾಪಡೆ ಟೆಕ್ನಿಕಲ್ ಎಂಟ್ರಿ ಸ್ಕೀಮ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ: 12th ವಿದ್ಯಾರ್ಹತೆ

Previous
« Prev Post

No comments:

Post a Comment

Popular Posts